Friday, September 4, 2026
spot_imgspot_img
spot_imgspot_img

ಪುತ್ತೂರು: ಬೈಕ್ ಅಪಘಾತದಿಂದ ತೀವ್ರ ಗಾಯಗೊಂಡಿದ್ದ ಹಿರಿಯ ಆರೋಗ್ಯ ನಿರೀಕ್ಷಕ ಸಾವು!

- Advertisement -
- Advertisement -

ಪುತ್ತೂರು: ಮಾಣಿಯಲ್ಲಿ ಬೈಕ್ ಅಪಘಾತದಿಂದ ತೀವ್ರ ಗಾಯಗೊಂಡಿದ್ದ ಪುತ್ತೂರು ಮುಂಡೂರು ನಿವಾಸಿ ಮಂಗಳೂರು ಕ್ಷಯ ನಿಯಂತ್ರಣ ಅಧಿಕಾರಿ ವಿಭಾಗದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕ ವೆಂಕಟೇಶ್ ಉದ್ಧಾರ್ ಅವರು ಎ.28ರಂದು ಬೆಳಿಗ್ಗೆ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.

ದಾರವಾಡ ಮೂಲದವರಾದ ವೆಂಕಟೇಶ್ ಉದ್ಧಾರ್ ಅವರು ಮುಂಡೂರಿನಲ್ಲಿ ವಾಸ್ತವ್ಯ ಹೊಂದಿದ್ದು, 1998ರಲ್ಲಿ ಪುತ್ತೂರು ಆರೋಗ್ಯ ಇಲಾಖೆಯಲ್ಲಿ ಸೇವೆಯನ್ನು ಆರಂಭಿಸಿ ಆರಂಭದಲ್ಲಿ ಕುಷ್ಟ ರೋಗ ನಿಯಂತ್ರಣ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದರು.

- Advertisement -

Related news

error: Content is protected !!