Monday, June 8, 2026
spot_imgspot_img
spot_imgspot_img

ಪುತ್ತೂರು: ಕುಡಿದ ಮತ್ತಿನಲ್ಲಿ ಓವರ್ ಟೇಕ್; ಸರಣಿ ಅಪಘಾತ

- Advertisement -
- Advertisement -

ಪುತ್ತೂರು: ಓವರ್ ಟೇಕ್ ಬರದಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಸ್ಕೂಟರ್, ಆಟೋ ರಿಕ್ಷಾ, ಕಾರಿಗೆ ಡಿಕ್ಕಿ ಹೊಡೆದ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಉರ್ಲಾಂಡಿ ಬೈಪಾಸ್ ಬಳಿ ಸಂಭವಿಸಿದೆ .

ಉಪ್ಪಿನಂಗಡಿ ಕಡೆಯಿಂದ ಬರುತ್ತಿದ್ದ ಮಾರುತಿ ಸ್ವಿಪ್ಟ್ ಕಾರು ಬೈಪಾಸ್ ರಸ್ತೆಗೆ ಎಂಟ್ರಿಯಾಗಿ ಮುಂದೆ ಹೋಗುತ್ತಿದ್ದ ಆಟೋ ರಿಕ್ಷಾಕ್ಕೆ ಡಿಕ್ಕಿಯಾಗಿದೆ. ಬಳಿಕ ವಿರುದ್ಧ ಧಿಕ್ಕಿನಿಂದ ಬರುತ್ತಿದ್ದ ಸ್ಕೂಟರ್ ಮತ್ತು ಕಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರೆ ‌ ಬಬಿತಾ ಮತ್ತು ಆಟೋ ರಿಕ್ಷಾದಲ್ಲಿ ಪ್ರಯಾಣಿಕರಿಗೆ ಗಾಯವಾಗಿದೆ.

ಅಪಘಾತದಿಂದಾಗಿ ಸ್ಕೂಟರ್, ಆಟೋ ರಿಕ್ಷಾ, ಎರಡೂ ಕಾರುಗಳಿಗೆ ಹಾನಿಯಾಗಿದೆ. ಕಾರು ಚಾಲಕ ಮದ್ಯ ಸೇವನೆ ಮಾಡಿ ಚಲಾಯಿಸಿದ್ದಾನೆ ಎಂದು ತಿಳಿದು ಬಂದಿದ್ದು ಪುತ್ತೂರು ಸಂಚಾರಿ ಠಾಣೆಯ ಯಸ್. ಐ. ರಾಮನಾಯ್ಕ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪುತ್ತೂರು ಸಂಚಾರಿ ಠಾಣೆಯಲ್ಲಿ ಕೇಸು ದಾಖಲಾಗಿದೆ.

- Advertisement -

Related news

error: Content is protected !!