Sunday, October 6, 2024
spot_imgspot_img
spot_imgspot_img

ಪುತ್ತೂರು: ಹೃದಯಾಘಾತದಿಂದ ತಾಲೂಕು ಕಚೇರಿ ಚುನಾವಣಾ ಶಾಖಾ ಸಿಬ್ಬಂದಿ ನಿಧನ..!

- Advertisement -
- Advertisement -

ಪುತ್ತೂರು: ತಾಲೂಕು ಕಚೇರಿಯ ಚುನಾವಣಾ ಶಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದ ಕನಕರಾಜ್ ಹೃದಯಾಘಾತದಿಂದ ನಿಧನರಾದರು.

ರಾತ್ರಿ ವೇಳೆ ಕನಕರಾಜ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಕೂಡಲೇ ಆಸ್ಪತ್ರೆಗೆ ಕರೆ ತರಲಾಯಿತು. ಆಸ್ಪತ್ರೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೈಸೂರಿನ ಕೊಳ್ಳೆಗಾಲ ನಿವಾಸಿಯಾಗಿರುವ ಕನಕರಾಜ್ ಈ ಹಿಂದೆ ಬೆಟ್ಟಂಪಾಡಿಯಲ್ಲಿ ಗ್ರಾಮ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ನಂತರ ಪ್ರಥಮ ದರ್ಜೆ ಸಹಾಯಕರಾಗಿ ಭಡ್ತಿ ಪಡೆದು ತಾಲೂಕು ಕಚೇರಿಯ ಚುನಾವಣಾ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.

- Advertisement -

Related news

error: Content is protected !!