Tuesday, April 30, 2024
spot_imgspot_img
spot_imgspot_img

ಪುತ್ತೂರು: 94ಸಿ ಗೆ ಪಿಡಿಒಗಳಿಂದ ದೃಢೀಕರಣ ಪತ್ರ ಕೇಳಬೇಡಿ; ತಹಶಿಲ್ದಾರ್‌ಗೆ ಶಾಸಕರ ಸೂಚನೆ

- Advertisement -G L Acharya panikkar
- Advertisement -

ಪುತ್ತೂರು: ಗ್ರಾಮೀಣ ಭಾಗದ ಬಡವರು ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದರೆ ಅವರಿಗೆ ಹಕ್ಕು ಪತ್ರ ಕೊಡಬೇಕು. 94 ಸಿ ಅರ್ಜಿ ಜೊತೆಗೆ ಗ್ರಾಮದ ಪಿಡಿಒಗಳಿಂದ ದೃಢೀಕರಣ ಪತ್ರ ಬೇಕು ಎಂದು ತಹಶಿಲ್ದಾರ್ ಹೇಳುತ್ತಿದ್ದು ಯಾವುದೇ ಕಾರಣಕ್ಕೂ ಪಿಡಿಒಗಳಿಂದ ದೃಡೀಕರಣ ಪತ್ರ ಕೇಳಬೇಡಿ ಎಂದು ಶಾಸಕ ಅಶೋಕ್ ರೈ ತಹಶಿಲ್ದಾರ್ ಗೆ ಸೂಚನೆ ನೀಡಿದರು.ತಾಪಂ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಶಾಸಕರು ಈ ಸೂಚನೆಯನ್ನು ನೀಡಿದ್ದಾರೆ.

ಹಲವಾರು 94 ಸಿ ಅರ್ಜಿಗಳು ಪಿಡಿಒ ದೃಢೀಕರಣ ಪತ್ರವಿಲ್ಲದ ಕಾರಣಕ್ಕೆ ವಿಲೇವಾರಿಯಾಗಿಲ್ಲ ಎಂದು ಸಭೆಗೆ ತಹಶಿಲ್ದಾರ್ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು ಎರಡು ವರ್ಷದ ಹಿಂದೆ ಬಂದ ಪಿಡಿಒಗೆ ಹತ್ತು ವರ್ಷಗಳಿಂದ ಆ ಮನೆ ಅಲ್ಲಿದೆ ಎಂಬ ಮಾಹಿತಿ ಇರ್ಲಿಕ್ಕಿಲ್ಲ. ಅಕ್ಕಪಕ್ಕದ ಮನೆಯವರಲ್ಲಿ ಕೇಳಿ ದೃಡೀಕರಣ ಮಾಡಿ ದೃಡೀಕರಣ ಪತ್ರವಿಲ್ಲದೆ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದರು.

ಬಡವರು ಮನೆ ಕಟ್ಟಿರುವ ಜಾಗಕ್ಕೆ ಅರ್ಜಿ ಹಾಕಿದ್ದರೆ, ಅವರಿಗೆ ಮನೆ ಕಟ್ಟಿಕೊಂಡ ಜಾಗ ಬಿಟ್ಟು ಬೇರೆ ಜಾಗ ಇಲ್ಲ. ಬಡವರಿಗೆ ತೊಂದರೆ ನೀಡುವ ಕೆಲಸವನ್ನು ಯಾರೂ ಮಾಡಬಾರದು. 94 ಸಿ ಯ ಎಷ್ಟು ಅರ್ಜಿ ಯಾವ ಕಾರಣಕ್ಕೆ ಬಾಕಿಯಾಗಿದೆ ಎಂಬುದನ್ನು ನನ್ನ ಗಮನಕ್ಕೆ ತರಬೇಕು ಎಂದು ಶಾಸಕರು ಸೂಚನೆ ನೀಡಿದರು.

- Advertisement -

Related news

error: Content is protected !!