Thursday, May 16, 2024
spot_imgspot_img
spot_imgspot_img

ಪುತ್ತೂರು: ಮಸೀದಿಯಲ್ಲಿ ನಡೆದ ಹಲ್ಲೆ ಪ್ರಕರಣ; ಖಾಝಿ ನೇಮಕ ವಿಚಾರ ಹಾಗೂ ಹಲ್ಲೆ ಕುರಿತಂತೆ ಶರೀಫ್ ಸಾಲ್ಮರ ಸ್ಪಷ್ಟನೆ

- Advertisement -G L Acharya panikkar
- Advertisement -

ಪುತ್ತೂರಿನಲ್ಲಿ ಖಾಝಿ ನೇಮಕದ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಭೆಯ ಕುರಿತು ಅಲ್ಲಿ ಹಲ್ಲೆಗೊಳಗಾದ ಶರೀಫ್ ಸಾಲ್ಮರ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ದಿನಾಂಕ 15-10-2021 ರಂದು ಪುತ್ತೂರು ಅನ್ಸಾರುದ್ದೀನ್ ಜಮಾತ್ ಕಮಿಟಿಯ ಸಭೆಯು ಬದ್ರಿಯಾ ಮಸೀದಿ ಸಭಾಂಗಣದಲ್ಲಿ ನಡೆದಿತ್ತು. ಪುತ್ತೂರು ಹಾಗೂ ಆಸುಪಾಸಿನ ಮೊಹಲ್ಲಾಗಳಿಗೆ ನೂತನ ಖಾಝಿಯನ್ನು ನೇಮಕ ಮಾಡುವ ಬಗ್ಗೆ ಚರ್ಚೆ ನಡೆಸಲು ಈ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಅನೇಕ ಮಂದಿ ಭಾಗವಹಿಸಿದ್ದರು.

ಸಭೆಯಲ್ಲಿ ಖಾಝಿ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆಗಳು ನಡೆದವು. ಸಭೆ ನಡೆಯುತ್ತಿದ್ದ ವೇಳೆ ಎದ್ದು ನಿಂತು ಮಾತನಾಡಿದ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಅವರು ಖಾಝಿ ನೇಮಕದ ರೂಪುರೇಶೆಗಳ ಬಗ್ಗೆ ವಿವಿರಣೆ ನೀಡಿದರು. ಖಾಝಿಯ ನೇಮಕ ಅಥವಾ ಖಾಝಿಯನ್ನು ಸ್ವೀಕಾರ ಮಾಡುವುದು ಕ್ರಮಬದ್ದವಾಗಿ ಆಗಬೇಕಿದೆ. ಇಸ್ಲಾಮಿನಲ್ಲಿ ಖಾಝಿಗೆ ವಿಶೇಷವಾದ ಮಹತ್ವ ಹಾಗೂ ಸ್ಥಾನ ಮಾನವಿದೆ. ಮೊಹಲ್ಲಾಗಳಿಗೆ ಖಾಝಿಯನ್ನು ನೇಮಕ ಮಾಡಬೇಕಾದರೆ ಜಮಾತಿನ ಅಭಿಪ್ರಾಯವನ್ನು ಪರಿಗಣಿಸಬೇಕಿದೆ, ಜಮಾತಿನಲ್ಲಿರುವ ಹಿರಿಯರ ಅಥವಾ ಪ್ರಮುಖರ ಅಭಿಪ್ರಾಯಕ್ಕೆ ಗೌರವ ನೀಡಬೇಕು, ಯಾರನ್ನೂ ಖಾಝಿಮಾಡಬೇಕು ಎಂಬ ತೀರ್ಮಾನಕ್ಕೆ ಅಥವಾ ಚರ್ಚೆ ಮಾಡುವ ಬದಲು ಖಾಝಿಯ ನೇಮಕದ ಬಗ್ಗೆ ಜಮಾತಿನಲ್ಲಿ ಚರ್ಚೆ ನಡೆದ ಪ್ರತೀಯೊಬ್ಬರ ಅಭಿಪ್ರಾಯ ಪಡೆದುಕೊಳ್ಳಬೇಕು. ಏಕಾಏಕಿಯಾಗಿ ಸಭೆ ಕರೆದು ಖಾಝಿಯನ್ನು ನೇಮಕ ಮಾಡುವುದು ಸರಿಯಾದ ಕ್ರಮವಲ್ಲಎಲ್ಲದಕ್ಕೂ ಮೊದಲಾಗಿದೆ ಖಾಝಿ ನೇಮಕದ ಸಾಧಕ ಬಾದಕಗಳ ಬಗ್ಗೆ ಚರ್ಚೆಯಾಗಬೇಕು, ಜಮಾತರ ಅಭಿಪ್ರಾಯ ಪಡೆಯಬೇಕು ಎಂದು ಹೇಳಿದ್ದಾರೆ.

ಆ ಬಳಿಕ ಮಾತನಾಡಿದ ಶರೀಫ್ ಸಾಲ್ಮರ ಈ ಸಭೆಯಲ್ಲಿ ನಡೆಸುವ ತೀರ್ಮಾನಕ್ಕೆ ಎಲ್ಲರ ಒಪ್ಪಿಗೆ ಇದೆಯೇ? ಇತರೆ ಮೊಹಲ್ಲಾಗಳ ಸದಸ್ಯರ ಅಭಿಪ್ರಾಯ ಸಂಗ್ರಹಿಸಲಾಗಿದೆಯೇ ಮಾತ್ರವಲ್ಲದೆ ಈಗ ಅಸ್ತಿತ್ವದಲ್ಲಿರುವ ಹಾಲಿ ಕಮಿಟಿಯ ಅವಧಿ ಮುಕ್ತಾಯಗೊಂಡಿದ್ದು ಈ ಕಮಿಟಿಗೆ ಖಾಝಿಯ ನೇಮಕಾತಿ ಮಾಡುವ ಹಕ್ಕು ಇರುವುದಿಲ್ಲ ಎಂದು ಹೇಳಿದ್ದಾರೆ ಆ ವೇಳೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಮಾತ್ ಅಧ್ಯಕ್ಷರೂ ಆಗಿರುವ ಎಲ್ ಟಿ ಅಬ್ದುಲ್ ರಝಾಕ್ ಹಾಜಿಯವರು ನಮಗೆ ಎಲ್ಲವೂ ಗೊತ್ತಿದೆ. ನಮಗೆ ಅಧಿಕಾರವಿಲ್ಲ ಎಂದು ಹೇಳುತ್ತೀಯಲ್ಲ ಎಂದು ಶರೀಫ್‌ರವರಿಗೆ ಉದ್ರೇಕ ರೂಪದಲ್ಲಿ ಉತ್ತರವನ್ನು ನೀಡಿದ್ದಾರೆ. ಈ ವೇಳೆ ತಳ್ಳಾಟ, ನೂಕಾಟ ನಡೆದಿರುತ್ತದೆ.

ಇಲ್ಲಿ ಮುಖ್ಯವಾಗಿ ಇರುವ ವಿಚಾರವೆಂದರೆ ಖಾಝಿಯ ನೇಮಕ. ಬಹು. ಜಿಫ್ರಿ ತಂಙಳ್‌ರವರ ಬಗ್ಗೆ ಎಲ್ಲರಿಗೂ ಗೌರವ ಇದೆ. ಅವರು ಸಮಸ್ತದ ಅಧ್ಯಕ್ಷರಾಗಿ ಅವರ ಮೇಲೆ ಎಲ್ಲರಿಗೂ ಅಭಿಮಾನವಿದೆ. ತಂಙಳ್‌ರನ್ನು ಖಾಝಿ ಮಾಡಬೇಡಿ ಎಂದು ಯಾರೂ ಹೇಳಿಲ್ಲ. ಯಾರನ್ನೇ ಆಗಲಿ ಖಾಝಿಯಾಗಿ ನೇಮಕ ಮಾಡಬೇಕಾದರೆ ಅದಕ್ಕೆ ಅದರದೇ ಆದ ನಿಯಮವಿದೆ. ಒಮ್ಮೆ ಖಾಝಿ ಸ್ವೀಕಾರ ಮಾಡಿದರೆ ಮತ್ತೆ ಅದನ್ನು ಬದಲಾಯಿಸುವಂತಿಲ್ಲ. ಖಾಝಿ ಯ ಅಧಿಕಾರ ಏನು? ಜಮಾತರು ಅದರಲ್ಲಿ ಪಾಲ್ಗೊಳ್ಳುವ ಬಗೆ ಏನು? ಸೇರಿದಂತೆ ಇನ್ನೂ ಅನೇಕ ವಿಚಾರಗಳನ್ನು ಖಾಝಿ ಸ್ವೀಕಾರ ಮಾಡುವ ಜಮಾತರ ಜೊತೆ ನಾವು ಚರ್ಚಿಸಬೇಕಿದೆ.

ಹಿರಿಯರ ಅಭಿಪ್ರಾಯ ಪಡೆದುಕೊಳ್ಳಬೇಕಿದೆ ಅದಾವುದನ್ನೂ ಮಾಡದೆ ಜಮಾತ್ ಅಧ್ಯಕ್ಷ ಎಲ್ ಟಿ ರಝಾಕ್ಹಾಜಿ ಮತ್ತು ರಶೀದ್ ಪರ್ಲಡ್ಕ ರವರು ಸೇರಿಕೊಂಡು ತಮ್ಮ ಸ್ವಾರ್ಥಕ್ಕಾಗಿ ಜಮಾತರನ್ನು ಬಲಿಪಶುಗಳನ್ನಾಗಿ ಮಾಡುವುದು ಯಾವ ನ್ಯಾಯ? ಜಮಾತರ ಮಾತಿಗೆ ಗೌರವ ಇಲ್ಲದೇ, ಮಾನ್ಯತೆ ಇಲ್ಲದೆ ತಮಗಿಷ್ಟ ಬಂದ0ತೆ ಅಧಿಕಾರ ಚಲಾಯಿಸಲು ಮುಂದಾಗಿದ್ದು ನ್ಯಾಯವೇ? ಇಬ್ಬರಿಗೋಸ್ಕರ ಪುತ್ತೂರು ಸೇರಿದಂತೆ ನೆರೆಯ ಜಮಾತಿನ ಮಂದಿಯನ್ನು ಬಲಿಪಶು ಮಾಡುವುದು ಎಷ್ಟು ಮಾತ್ರಸರಿ ? ಎಲ್ ಟಿ ರಝಾಕ್ ಹಾಜಿ ಮತ್ತು ರಶೀದ್ ಪರ್ಲಡ್ಕರವರು ತಮ್ಮ ಸ್ವಾರ್ಥಕ್ಕೋಸ್ಕರ ಮಾಡಿರುವ ಈ ತರಾತುರಿ ತೀರ್ಮಾನವನ್ನು ಜಮಾತರ ಮೇಲೆ ಹೊರಿಸುವುದು ನ್ಯಾಯವೇ? ಇದು ಅಲ್ಲಾಹನು ಮೆಚ್ಚು ಕೆಲಸವೇ? ಖಾಝಿ ಅಥವಾ ಖಾಝಿಯ ನೇಮಕ ಯಾವರೀತಿ ಆಗಬೇಕು ಎಂಬುದರ ಬಗ್ಗೆ ಗೊತ್ತಿಲ್ಲದೆ ಇದ್ದಲ್ಲಿ ಉಲಮಾಗಳ ಬಳಿ ಮಾಹಿತಿ ಪಡೆದು ಅದರಂತೆ ರೂಪುರೇಶೆಗಳನ್ನು ಸಿದ್ದಪಡಿಸಿ, ಜಮಾತರ ಸಭೆ ಕರೆದು, ಸುತ್ತಮುತ್ತಲಿನ ಜಮಾತಿಗೆ ಭೇಟಿ ನೀಡಿ ಅಲ್ಲಿನ ಜಮಾತರಿಂದ ಅಭಿಪ್ರಾಯ ಸಂಗ್ರಹಿಸಿ ಮಾಡುವ ಕಾರ್ಯವನ್ನು ಇಬ್ಬರೇ ತೀರ್ಮಾನ ಮಾಡುವುದು ಸರಿಯಾದ ಹಾಗೂ ನ್ಯಾಯ ಬದ್ದ ಕ್ರಮವಲ್ಲ ಎಂಬುದನ್ನು ಹೇಳಿದ್ದಕ್ಕೆ ಗೊಂದಲವನ್ನು ಸೃಷ್ಟಿಸಿ ಸತ್ಯವನ್ನು ಮತ್ತು ನ್ಯಾಯವನ್ನು ಮರೆ ಮಾಚುವ ಕೆಲಸ ನಡೆದಿರುವುದು ಖಂಡನೀಯ. ಪ್ರತಿಯೊಬ್ಬರೂ ಈ ಬಗ್ಗೆ ಆಲೋಚಿಸಿ ಕಾಲ ಮಿಂಚಿದ ಮೇಲೆ ಚಿಂತಿಸಿ ಪ್ರಯೋಜಕ್ಕೆ ಸಿಗದೆ ಹೋಗಬಹುದು ಎಂದು ಶರೀಫ್ ಸ್ಪಷ್ಟನೆ ನೀಡಿದ್ದಾರೆ.

- Advertisement -

Related news

error: Content is protected !!