Tuesday, June 9, 2026
spot_imgspot_img
spot_imgspot_img

ಪುತ್ತೂರು: ಕೀಟನಾಶಕ ಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆ..!

- Advertisement -
- Advertisement -

ಪುತ್ತೂರು: ಕಾಲೇಜು ವಿದ್ಯಾರ್ಥಿನಿಯೋರ್ವಳು ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪ್ರತಿಭಾವಂತ ಕ್ರೀಡಾಪಟು ಮೃತಪಟ್ಟಿರುವ ಘಟನೆ ಪುತ್ತೂರಿನಲ್ಲಿ ನಡೆಸಿದೆ.

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಕುರಿಯ ಗ್ರಾಮದ ಸಂಪ್ಯ ಮಂಜಪ್ಪ ಗೌಡರ ಪುತ್ರಿ ನಿಶಾ ಬಿ.ಎಮ್.(17) ಎಂದು ಗುರುತಿಸಲಾಗಿದೆ.

ನಗರದ ಪದವಿ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿದ್ದು ಕೆಲ ದಿನಗಳ ಹಿಂದೆ ಬಿಹಾರದಲ್ಲಿ ನಡೆದ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಅಲ್ಲಿ ಯಾವುದೇ ಬಹುಮಾನ ದೊರೆಯದೇ ಹಿಂತಿರುಗಿ ಮನೆಗೆ ಬಂದವಳು ಬೇಸರದಲ್ಲಿದ್ದಳು. ವಿಪರೀತವಾಗಿ ವಾಂತಿ ಮಾಡುತ್ತಿದ್ದು, ಇದರಿಂದ ಅಸ್ವಸ್ಥಳಾದವಳನ್ನು ಈ ಬಗ್ಗೆ ವಿಚಾರಿಸಿದಾಗ ತಾನು ಸಂಜೆ ತೋಟಕ್ಕೆ ಬೀಡುವ ಕೀಟನಾಶಕವನ್ನು ಸೇವಿಸಿರುವುದಾಗಿ ತಿಳಿಸಿದ್ದಳು. ಕೂಡಲೇ ಅವರನ್ನು ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಮುಕ್ಕದಲ್ಲಿನ ಶ್ರೀನಿವಾಸ ಆಸ್ಪತ್ರೆಗೆ ದಾಖಲುಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಸಂಪ್ಯ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದು ಅದರಂತೆ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!