Thursday, April 25, 2024
spot_imgspot_img
spot_imgspot_img

ಪುತ್ತೂರು: ಬಕ್ರೀದ್ ಹಬ್ಬದ ಪ್ರಯುಕ್ತ ರೋಗಿಗಳಿಗೆ ಉಚಿತ ಊಟ ವಿತರಣೆ; ವಿಭಿನ್ನವಾಗಿ ಈದ್ ಆಚರಿಸಿದ SYF ಸಂಘಟನೆಯ ಸದಸ್ಯರು.

- Advertisement -G L Acharya panikkar
- Advertisement -

ಪುತ್ತೂರು: ಇಂದು ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 150ಕ್ಕೂ ಅಧಿಕ ರೋಗಿಗಳಿಗೆ ಹಾಗೂ ಮತ್ತವರ ಶುಶ್ರೂಷಕರಿಗೆ ಮಧ್ಯಾಹ್ನದ ಊಟ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡ ಎಸ್ ವೈ ಎಫ್ (ಸೆಕ್ಯುಲರ್ ಯೂತ್ ಫೋರಮ್) ಸಂಘಟನೆ ಸದಸ್ಯರು ಪವಿತ್ರ ಬಕ್ರೀದ್ ಹಬ್ಬವನ್ನು ವಿಭಿನ್ನವಾಗಿ ಆಚರಿಸುವ ಮೂಲಕ ಸಮಾಜಕ್ಕೆ ಮಾದರಿಯಾದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ವೈ ಎಫ್ ಸಂಘಟನೆಯ ಮುಖ್ಯಸ್ಥರಾದ ಮೋನು ಬಪ್ಪಳಿಗೆ ಅವರು ವಹಿಸಿಕೊಂಡಿದ್ದರು

ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾದ ಇಕ್ಬಾಲ್ ಪೆರಿಗೇರಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂಧರ್ಭದಲ್ಲಿ ಪುತ್ತೂರು MYC ವೈದ್ಯಕೀಯ ಸಮಿತಿ ಅಧ್ಯಕ್ಷರಾದ ನಝೀರ್ ಬಲ್ನಾಡ್, SYF ಸದಸ್ಯರಾದ ಸನದ್ ಕೂರ್ನಡ್ಕ, ರಶೀದ್ ಮುರ, ಅಲಿ ಪರ್ಲಡ್ಕ, ಬಶೀರ್ ಪರ್ಲಡ್ಕ, ಹಂಝತ್ ಸಾಲ್ಮರ, ವಿ.ಕೆ.ಶರೀಫ್ ಬಪ್ಪಳಿಗೆ, ಆಸಿಫ್ ಬಪ್ಪಳಿಗೆ, ಇಮ್ತಿಯಾಝ್ ಬಪ್ಪಳಿಗೆ, ಜಲೀಲ್ ಬಲ್ನಾಡ್, ಆಸಿಫ್ ಗೋಳಿಕಟ್ಟೆ, ಸಫ್ವಾನ್ ಕೂರತ್, ಶಮೀರ್ ಬೆದ್ರಾಳ, ತೌಹೀದ್, ಇರ್ಷಾದ್ ಸಾಲ್ಮರ, ಬಿಎಚ್ ರಝಾಕ್ ಬಪ್ಪಳಿಗೆ ಹಾಗೂ ಅಶ್ರಫ್ ಸವಣೂರು ಉಪಸ್ಥಿತರಿದ್ದರು.

- Advertisement -

Related news

error: Content is protected !!