Sunday, June 14, 2026
spot_imgspot_img
spot_imgspot_img

(ಜು. 5) ನಾಳೆ ಕರಾವಳಿಯಾದ್ಯಂತ ’ಧರ್ಮದೈವ’ ತೆರೆಗೆ.. BOOK MY SHOW ದಲ್ಲಿ ಇಂದೇ ಟಿಕೆಟ್‌ ಬುಕ್‌ ಮಾಡಿ.. ಸಿನಿಮಾ ನೋಡಿ…!

- Advertisement -
- Advertisement -

ಪ್ರೀಮಿಯರ್‌ ಶೋನಲ್ಲಿ ಹೌಸ್‌ಫುಲ್‌ ಪ್ರದರ್ಶನದೊಂದಿಗೆ ಯಶಸ್ಸಿನ ಮುನ್ನುಡಿ ಬರೆದ ’ಧರ್ಮದೈವ’ ಸಿನಿಮಾ

ಪುತ್ತೂರು: ಧರ್ಮದೈವ ಪ್ರೊಡಕ್ಷನ್‌ ಲಾಂಛನದಲ್ಲಿ ಬಿಳಿಯೂರು ರಾಕೇಶ್‌ ಭೋಜರಾಜಶೆಟ್ಟಿ ನಿರ್ಮಾಣದಲ್ಲಿ ನಿತಿನ್‌ ರೈ ನುಳಿಯಾಲು ನಿರ್ದೇಶನದ ಧರ್ಮದೈವ ಸಿಮಿಮಾ ಪುತ್ತೂರಿನ ಜಿ ಎಲ್‌ ಒನ್‌ ಮಾಲ್‌ನ ಭಾರತ್‌ ಸಿನಿಮಾದಲ್ಲಿ ಮೊದಲ ಪ್ರೀಮಿಯರ್‌ ಶೋ ಭರ್ಜರಿ ಪ್ರದರ್ಶನ ಕಂಡಿತು.

ಪುತ್ತೂರಿನ ಅತೀ ಹೆಚ್ಚು ಕಲಾವಿದರ ಕೂಡುವಿಕೆಯೊಂದಿಗೆ ನಿರ್ಮಾಣಗೊಂಡ ಧರ್ಮದೈವ ಸಿನಿಮಾ ಪುತ್ತೂರಿನಲ್ಲಿ ಮೊದಲನೇ ಪ್ರೀಮಿಯರ್‌ ಶೋ ನಲ್ಲಿ ಹೌಸ್‌ಫುಲ್‌ ನೊಂದಿದೆ ಯಶಸ್ಸಿನ ಮುನ್ನುಡಿ ಬರೆದಿದೆ.

ಪುತ್ತೂರಿನ ಪ್ರತಿಷ್ಠಿತ ಜಿ ಎಲ್‌ ಒನ್‌ ಮಾಲ್‌ನ ಭಾರತ್‌ ಸಿನಿಮಾಸ್‌ನಲ್ಲಿ ಸಂಜೆ 7 ಗಂಟೆಗೆ ಮೊದಲ ಪ್ರೀಮಿಯರ್‌ ಶೋ ಪ್ರದರ್ಶನಗೊಂಡಿತು. ದೀಪ ಪ್ರಜ್ವಲನೆಯ ಮೂಲಕ ಪ್ರೀಮಿಯರ್‌ ಶೋ ಉದ್ಘಾಟಿಸಲಾಯಿತು. ಬಳಿಕ ಧರ್ಮದೈವ ಸಿನಿಮಾ ಪ್ರದರ್ಶನಗೊಂಡಿತು. ಬಳಿಕ ನಿರ್ದೇಶಕ ನಿತಿನ್‌ ರೈ ನುಳಿಯಾಲು ಮಾತನಾಡಿ ’ ಜುಲೈ 5 ರಂದು ಧರ್ಮದೈವ ತೆರೆಗೆ ಬರ್‍ತಾ ಇದೆ. ಜಿಲ್ಲೆಯಾದ್ಯಂತ ಬಿಡುಗಡೆಗೊಳ್ಳುವ ನಮ್ಮ ಈ ಧರ್ಮದೈವ ಸಿನಿಮಾವನ್ನು ಎಲ್ಲರೂ ಥಿಯೇಟರ್‌ಗಳಲ್ಲಿ ಬಂದು ವೀಕ್ಷಿಸಿ ಸಿನಿಮಾ ಗೆಲ್ಲಿಸಿ, ಆಶಿರ್ವದಿಸಿ ಎಂದರು.

ಸಿನಿಮಾದ ಬಗ್ಗೆ ಸಹಕಾರ ರತ್ನ ಸದಾಶಿವ ರೈ ದಂಬೆಕಾನ, ಹಿಂದೂ ಮುಖಂಡ ಅರುಣ್‌ ಕುಮಾರ್‍ ಪುತ್ತಿಲ, ಸೇರಿದಂತೆ ಹಲವು ಅತಿಥಿಗಳು, ಸೇರಿದಂತೆ ಸಿನಿ ಪ್ರಿಯರು ಧರ್ಮದೈವ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಿನಿಮಾ ತಂಡ ಸೇರಿದಂತೆ ಹಲವು ಅತಿಥಿಗಳು, ಹಿತೈಷಿಗಳು, ಸಿನಿಪ್ರಿಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!