Saturday, June 13, 2026
spot_imgspot_img
spot_imgspot_img

ಪುತ್ತೂರಿನ 4 ಮಸೀದಿಗಳ ಅಭಿವೃದ್ಧಿಗೆ 75 ಲಕ್ಷ ರೂ. ಅನುದಾನ: ಶಾಸಕ ಅಶೋಕ್ ಕುಮಾರ್ ರೈ

- Advertisement -
- Advertisement -

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಾಲ್ಕು ಮಸೀದಿ ಹಾಗೂ ಮದ್ರಸಗಳ ನವೀಕರಣ ಮತ್ತು ದುರಸ್ತಿ ಕಾಮಗಾರಿಗಳಿಗಾಗಿ ವಕ್ಫ್ ಇಲಾಖೆಯ ವತಿಯಿಂದ ಒಟ್ಟು 75 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ಅನುದಾನ ಹಂಚಿಕೆಯ ವಿವರಗಳನ್ನು ಈ ಕೆಳಗಿನಂತೆ ನೀಡಿದ್ದಾರೆ.

ಬೆಟ್ಟಂಪಾಡಿ: ರೆಂಜ ಫಾರೂಕ್ ಜುಮಾ ಮಸೀದಿ ಹಾಗೂ ಖುವ್ವತ್ತುಲ್ ಇಸ್ಲಾಂ ಮದ್ರಸದ ಅಭಿವೃದ್ಧಿ ಕಾಮಗಾರಿಗಳಿಗಾಗಿ 20 ಲಕ್ಷ ರೂ.
ಬಜತ್ತೂರು: ಹಳೆನೇರಂಕಿ ಮುಹಿಯುದ್ದೀನ್ ಜುಮಾ ಮಸೀದಿಯ ನವೀಕರಣ ಮತ್ತು ದುರಸ್ತಿ ಕಾರ್ಯಕ್ಕೆ 15 ಲಕ್ಷ ರೂ.
ಶಾಂತಿಗೋಡು: ವೀರಮಂಗಲ ಬದ್ರಿಯಾ ಜುಮಾ ಮಸೀದಿಯ ಅಭಿವೃದ್ಧಿ ಕೆಲಸಗಳಿಗಾಗಿ 15 ಲಕ್ಷ ರೂ.
ಸಾಲ್ಮರ (ಪುತ್ತೂರು): ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧೀನದಲ್ಲಿರುವ ಸಯ್ಯದ್ ಮಲೆ ಜುಮಾ ಮಸೀದಿ ಮತ್ತು ಮಿಸ್ಮಾಹುಲ್ ಹುದಾ ಮದ್ರಸದ ಕಟ್ಟಡ ದುರಸ್ತಿಗೆ 25 ಲಕ್ಷ ರೂ.

ಕ್ಷೇತ್ರದ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಪೂರಕವಾಗಿ ಈ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು. ಇದರಿಂದ ಮಸೀದಿ ಮತ್ತು ಮದ್ರಸಗಳ ಮೂಲಸೌಕರ್ಯ ಸುಧಾರಣೆಯಾಗಲಿದೆ ಎಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!