Tuesday, June 9, 2026
spot_imgspot_img
spot_imgspot_img

ಪುತ್ತೂರಿಗೆ ಅಖಿಲಭಾರತ ಹಿಂದೂ ಮಹಾಸಭಾ ಕರ್ನಾಟಕ ಪಕ್ಷದ ರಾಜ್ಯಾಧ್ಯಕ್ಷರ ದಿಢೀರ್ ಭೇಟಿ

- Advertisement -
- Advertisement -

ಪುತ್ತೂರು: ಸಾವರ್ಕರ್ ಅವರ ಹಿಂದು ಸಿದ್ದಾಂತದ ಅಖಿಲಭಾರತ ಹಿಂದೂ ಮಹಾಸಭಾ ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷರಾದ ರಾಜೇಶ್ ಪವಿತ್ರನ್ ಅವರು ಪುತ್ತೂರಿಗೆ ದಿಢೀರ್ ಭೇಟಿ ನೀಡಿದರು.

ಕರ್ನಾಟಕ ರಾಜ್ಯಾದ್ಯಂತ ಬಹಳ‌ ಸಂಚಲನ ಮೂಡಿಸುತ್ತಿರುವ ಹಿಂದೂ ಪಕ್ಷದ ಸಿದ್ದಾಂತಗಳ ಮತ್ತು ಮುಂದಿನ ಚುನಾವಣಾ ಕಾರ್ಯವೈಖರಿಗಳ ಚರ್ಚೆಯನ್ನು ಕಾರ್ಯಕರ್ತರ ಜೊತೆ ನಡೆಸಿದರು.

ಇವರೊಂದಿಗೆ ರಾಜ್ಯ ಪ್ರಧಾನ‌ ಕಾರ್ಯದರ್ಶಿರಾದ ಧರ್ಮೇಂದ್ರರವರು ಪಕ್ಷದ ಉದ್ದೇಶ ಮತ್ತು ಧರ್ಮದ ಉಳಿವಿಗೋಸ್ಕರ ನಾವು ಯಾವ ರೀತಿ ಅಧಿಕಾರ ಮಾಡಬೇಕೆಂದು ಪುತ್ತೂರಿನ ಕಾರ್ಯಕರ್ತರ ಜೊತೆ ಚರ್ಚಿಸಿದರು.

ಈ ವೇಳೆ ಪ್ರೇಮ್ ಪೊಳಲಿ,ಸಂದೀಪ್ ಶೆಟ್ಟಿ ಅಡ್ಕ ,ಚೇತನ್ ಮೂಡಬಿದಿರೆ ಮತ್ತು ಕೆಲವು ಹಿಂದೂ ಕಾರ್ಯಕರ್ತರು ಉಪಸ್ಥಿತರಿದ್ದರು. ಧನ್ಯಕುಮಾರ್ ಬೆಳಂದೂರು ಮತ್ತು ರಾಜೇಶ್ ಪ್ರಸಾದ್ ಕೌಡಿಚ್ಚಾರು ಅತಿಥಿಗಳನ್ನು ಸ್ವಾಗತಿಸಿದರು.

driving
- Advertisement -

Related news

error: Content is protected !!