Friday, April 26, 2024
spot_imgspot_img
spot_imgspot_img

ಪುತ್ತೂರು: ಆಟೋರಿಕ್ಷಾ ಕಾರು ಹಾಗೂ ಪಿಕಪ್ ನಡುವೆ ಸರಣಿ ಅಪಘಾತ; ಮೂವರಿಗೆ ಗಂಭೀರ ಗಾಯ!

- Advertisement -G L Acharya panikkar
- Advertisement -

ಪುತ್ತೂರು: ಆಟೋ ರಿಕ್ಷಾವೊಂದು ಕಾರಿನ ಸೈಡ್ ಮಿರರ್‌ಗೆ ತಾಗಿ ಬಳಿಕ ಪಿಕಪ್ ಜೀಪ್‌ಗೆ ಡಿಕ್ಕಿಯಾಗಿ ಪಲ್ಟಿಯಾದ ಘಟನೆ ಪುತ್ತೂರು ಪರ್ಲಡ್ಕ ಸಮೀಪದ ಗೋಳಿಕಟ್ಟೆಯಲ್ಲಿ ಜು. 26ರಂದು ಸಂಭವಿಸಿದೆ.

ಅಪಘಾತದಲ್ಲಿ ಆಟೋ ರಿಕ್ಷಾದಲ್ಲಿದ್ದ ಚಾಲಕ ಸಹಿತ ಮೂವರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸರು ಭೇಟಿ ನೀಡಿದ್ದಾರೆ. ಸಂಪ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದ ಹಿನ್ನೆಲೆ ಸಂಪ್ಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!