Monday, July 27, 2026
spot_imgspot_img
spot_imgspot_img

ರಾಘವ್ ಛಡ್ಡಾ ಸಹಿತ ಮೂವರು ಸಂಸದರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ

- Advertisement -
- Advertisement -

ಹೊಸದಿಲ್ಲಿ: ಆಪ್ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದ ರಾಜ್ಯಸಭಾ ಸಂಸದರಾದ ರಾಘವ್ ಛಡ್ವಾ, ಅಶೋಕ್ ಮಿತ್ತಲ್, ಸಂದೀಪ್ ಪಾಠಕ್ ಅವರು ದಿಲ್ಲಿಯಲ್ಲಿ ಪಕ್ಷದ ಮುಖ್ಯಸ್ಥ ನಿತಿನ್ ನಬಿನ್ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ರಾಘವ್ ಛಡ್ವಾ, ಅಶೋಕ್ ಮಿತ್ತಲ್, ಸಂದೀಪ್ ಪಾಠಕ್ ಅವರಿಗೆ ಹೂಗುಚ್ಛವನ್ನು ನೀಡಿ ನಿತಿನ್ ನಬಿನ್ ಸ್ವಾಗತಿಸಿದರು. ಹರ್ಭಜನ್ ಸಿಂಗ್, ವಿಕ್ರಮ್ ಸಾಹಿ, ಸ್ವಾತಿ ಮಲಿವಾಲ್ ಮತ್ತು ರಾಜೇಂದ್ರ ಗುಪ್ತಾ ಅವರು ಕೂಡ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ರಾಘವ್ ಛಡ್ಡಾ ಅವರನ್ನು ಎ.2ರಂದು AAP ಪಕ್ಷದ ಉಪನಾಯಕ ಸ್ಥಾನದಿಂದ ವಜಾಗೊಳಿಸಲಾಗಿತ್ತು. 2023ರಿಂದ ಈ ಹುದ್ದೆಯನ್ನು ನಿರ್ವಹಿಸುತ್ತಿದ್ದ ಛಡ್ಡಾ ಅವರ ಸ್ಥಾನಕ್ಕೆ ಪಂಜಾಬ್ ಸಂಸದ ಅಶೋಕ್ ಮಿತ್ತಲ್ ಅವರನ್ನು ನೇಮಕ ಮಾಡಲಾಗಿತ್ತು. ಇದು ಪಕ್ಷದ ಆಂತರಿಕ ವಲಯದಲ್ಲಿ ವಾಗ್ವಾದಕ್ಕೆ ಕಾರಣವಾಗಿತ್ತು. ಆಪ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಾಗಿ ಶುಕ್ರವಾರ ರಾಘವ್ ಛಡ್ಡಾ ಘೋಷಿಸಿದ್ದರು.

- Advertisement -

Related news

error: Content is protected !!