Thursday, July 23, 2026
spot_imgspot_img
spot_imgspot_img

ಕಾರು ಕಳವಿಗೆ ಯತ್ನ: ಆರೋಪಿಗಳು ಪರಾರಿ

- Advertisement -
- Advertisement -

ಗಂಗೊಳ್ಳಿ: ಕಾರು ಕಳವು ಮಾಡಲು ಯತ್ನಿಸುತ್ತಿದ್ದ ಕಳ್ಳರು ಬೈಕ್‌ನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿರುವ ಘಟನೆ ಮೇ 11ರಂದು ರಾತ್ರಿ 11.15ರ ಸುಮಾರಿಗೆ ಮರವಂತೆಯ ನಿರೋಣಿ ಎಂಬಲ್ಲಿ ನಡೆದಿದೆ.

ಮರವಂತೆಯ ರಿತೇಶ್ ದೇವಾಡಿಗ ಎಂಬವರು ನಿರೋಣಿಯಲ್ಲಿ ಶಾಮಿಯಾನ ಅಂಗಡಿ ನಡೆಸಿಕೊಂಡಿದ್ದು, ಮೆಹಂದಿ ಕಾರ್ಯಕ್ರಮಕ್ಕೆ ಹಾಕಿದ್ದ ಶಾಮಿಯಾನವನ್ನು ಅನ್‌ಲೋಡ್ ಮಾಡಲು ರಾತ್ರಿ ಅಂಗಡಿಯ ಹತ್ತಿರ ನಡೆದುಕೊಂಡು ಬರುತ್ತಿದ್ದರು. ಆಗ ಇವರ ಬಾವ ಗೋಪಾಲ ದೇವಾಡಿಗರು ಅಲ್ಲೇ ಸಮೀಪ ನಿಲ್ಲಿಸಿದ್ದ ಕಾರನ್ನು ಇಬ್ಬರೂ ಆರೋಪಿ ಗಳು ಕಳವು ಮಾಡಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.ಆರೋಪಿಗಳು ರಿತೇಶ್ ಬರುವುದನ್ನು ಕಂಡು ಅವರನ್ನು ದೂಡಿ ಕೃತ್ಯಕ್ಕೆ ಬಳಸಿದ ಬೈಕ್‌ನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿ ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!