- Advertisement -
- Advertisement -
ಹಿರಿಯಡ್ಕ ಮೇ 6: ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹಿರಿಯಡ್ಕ ಪೊಲೀಸರು ಪಕ್ಕಾಲು ಹೆಬ್ಬಾರು ಸೇತುವೆ ಮೇ 5ರಂದು ಬಂಧಿಸಿದ್ದಾರೆ.




ಕುರ್ಕಾಲುವಿನ ಸುಹಾಸ್ (21) ಹಾಗೂ ಕಾಪು ಭರತ್ ನಗರದ ಲವ ಶೆಟ್ಟಿ(64) ಬಂಧಿತ ಆರೋಪಿ.ಇವರು ಕಸಾಯಿಖಾನೆಗೆ ಮಾಂಸ ಮಾಡಲು ಪೆರ್ಡೂರು ಕಡೆಯಿಂದ ಹಿರಿಯಡಕ ಕಡೆಗೆ ಬೋಲೇರೊ ಟೆಂಪೋ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ 4 ಜಾನುವಾರುಗಳನ್ನು ಸಾಗಿಸುತ್ತಿದ್ದು ಪಕ್ಕಾಲು ಹೆಬ್ಬಾರು ಸೇತುವೆ ಬಳಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿತ್ತೆನ್ನಲಾಗಿದೆ.

ಇದರಲ್ಲಿದ್ದ ಇಬ್ಬರು ಆರೋಪಿಗಳು ಹಾಗೂ ನಾಲ್ಕು ಜಾನು ವಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣಲಾಗಿದೆ.

- Advertisement -








