Friday, July 24, 2026
spot_imgspot_img
spot_imgspot_img

ಮಂಗಳೂರು: ಲಿಫ್ಟ್ ಅವಘಡ: ಪೂಂಜಕೆರೆ ಯುವಕ ಮೃತ್ಯು

- Advertisement -
- Advertisement -

ಮಂಗಳೂರು, ಮೇ 16: ನಗರದ ಕುಂಟಿಕಾನದ ಮಾರ್ಟ್‌ವೊಂದರಲ್ಲಿ ಶನಿವಾರ ಸಂಜೆ ಸಂಭವಿಸಿದ ಲಿಫ್ಟ್ ಅವಘಡದಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾರೆ.

ಬೆಳಾಲು ಗ್ರಾಮದ ಪೂಂಜಕೆರೆ ನಿವಾಸಿ ನೌಫಾಲ್ (28) ಮೃತಪಟ್ಟ ಯುವಕ. ಶನಿವಾರ ಸಂಜೆ ನೌಫಾಲ್ ಕೆಲಸದಲ್ಲಿ ನಿರತರಾಗಿದ್ದ ವೇಳೆ ಲಿಫ್ಟ್‌ನಲ್ಲಿ ಅವಘಡ ಸಂಭವಿಸಿದೆ. ತಕ್ಷಣ ಇತರರು ಈತನನ್ನು ಅಪಾಯದಿಂದ ಪಾರು ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಮೃತ ನೌಫಾಲ್ ಅವಿವಾಹಿತ ಎಂದು ತಿಳಿದುಬಂದಿದೆ. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!