Sunday, July 19, 2026
spot_imgspot_img
spot_imgspot_img

ನಿಡ್ಪಳ್ಳಿಯ ವ್ಯಕ್ತಿಗೆ ಬಿ.ಸಿ.ರೋಡಿನಲ್ಲಿ ಕಾರು ಡಿಕ್ಕಿ- ಮೃತ್ಯು

- Advertisement -
- Advertisement -

ನಿಡ್ಪಳ್ಳಿ: ಬಿ.ಸಿ.ರೋಡಿನ ಸಾಗರ ಅಡಿಟೋರಿಯಂನಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಹೋದ ನಿಡಳ್ಳಿ ಆನಾಜೆ ನಿವಾಸಿ ವಿಶ್ವನಾಥ ರೈ ( 65 ವ) ಎಂಬವರು ಕಾರು ಅಪಘಾತದಲ್ಲಿ ನಿಧನರಾದ ಘಟನೆ ಮೆ.3 ರಂದು ಸಂಭವಿಸಿದೆ.

ಮದುವೆ ಕಾರ್ಯಕ್ರಮ ಮುಗಿದು ಮಧ್ಯಾಹ್ನ ರಸ್ತೆ ದಾಟುತ್ತಿದ್ದ ಸಮಯದಲ್ಲಿ ಬಿ.ಸಿ.ರೋಡ್ ಕಡೆಯಿಂದ ಮೆಲ್ಕಾರ್ ಕಡೆಗೆ ತೆರಳುತ್ತಿದ್ದ ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ಕಾರು ಅವರಿಗೆ ಡಿಕ್ಕಿ ಹೊಡೆದಿದೆ.ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ಬಿ.ಸಿ.ರೋಡ್ ಸೋಮಯಾಜಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಸ್‌.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ಮೃತ ಪಟ್ಟಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಆಸ್ಪತ್ರೆಯಿಂದ ಮೃತ ದೇಹವನ್ನು ಮೇ.4 ರಂದು ತಂದು ಆನಾಜೆಯಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು. ಮೃತರು ಪತ್ನಿ ಕುಸುಮಾವತಿ, ಪುತ್ರರಾದ ನಿಶಿತ್, ಹರ್ಷಿತ್, ಅವಿತ್ ಹಾಗೂ ಸಹೋದರ ಚಂದ್ರಶೇಖರ ರೈ ಇವರನ್ನು ಅಗಲಿದ್ದಾರೆ.

- Advertisement -

Related news

error: Content is protected !!