Monday, April 29, 2024
spot_imgspot_img
spot_imgspot_img

ಕೆಇಎ ಪರೀಕ್ಷಾ ಅಕ್ರಮದ ಕಿಂಗ್‌ಪಿನ್‌ ಆರ್‌ ಡಿ ಪಾಟೀಲ್‌ ಅರೆಸ್ಟ್..!

- Advertisement -G L Acharya panikkar
- Advertisement -

ಪಿಎಸ್‌ಐ ನೇಮಕಾತಿ ಪರೀಕ್ಷಾ ಹಗರಣಗಳ ಬಳಿಕ ರಾಜ್ಯಾದ್ಯಂತ ಸದ್ದು ಮಾಡಿದ್ದ ಕೆಇಎ ಪರೀಕ್ಷಾ ಅಕ್ರಮದ ಕಿಂಗ್‌ಪಿನ್‌ ರುದ್ರಗೌಡ ಪಾಟೀಲ್‌ ಅವರನ್ನು ಪೊಲೀಸರು ಕೊನೆಗೂ ಅರೆಸ್ಟ್‌ ಮಾಡಿದ್ದಾರೆ.

ಪರೀಕ್ಷಾ ಹಗರಣ ಬೆಳಕಿಗೆ ಬರುತ್ತಿದ್ದಂತೆ ಎಸ್ಕೇಪ್‌ ಆಗಿ ತಲೆಮರೆಸಿಕೊಂಡಿದ್ದ ಆರೋಪಿ ಆರ್‌ ಡಿ ಪಾಟೀಲ್‌ನನ್ನ ಕಲಬುರ್ಗಿ ಜಿಲ್ಲಾ ಪೊಲೀಸ್‌ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಅಫಜಲಪುರ- ಮಹರಾಷ್ಟ್ರ ಗಡಿಯಲ್ಲಿ ಬಂಧಿಸಿದ್ದಾರೆ.

ನವೆಂಬರ್‌ 6 ರಂದು ಪೊಲೀಸರು ಬಂಧನಕ್ಕೆ ತೆರಳಿದ್ದ ವೇಳೆ ಕಲಬುರ್ಗಿಯಲ್ಲಿ ಕಂಪೌಂಡ್‌ ಹಾರಿ ತಪ್ಪಿಸಿಕೊಂಡು ಹೋಗಿ ಅಡಗಿ ಕುಳಿತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಕಲಬುರ್ಗಿಗೆ ಕರೆತಂದಿದ್ದಾರೆ. ಅಜ್ಞಾತ ಸ್ಥಳದಿಂದ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಆರ್‌ ಡಿ ಪಾಟೀಲ್‌ ಅರ್ಜಿಯನ್ನು ಕಲಬುರ್ಗಿ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ತಿರಸ್ಕರಿಸಿತ್ತು.

- Advertisement -

Related news

error: Content is protected !!