- Advertisement -
- Advertisement -
ಬಂಟ್ವಾಳ : ಪೊಲೀಸರ ರ್ಯಾಪಿಡ್ ಆಕ್ಷನ್ ಫೋರ್ಸ್(ಆರ್‌ಎಎಫ್)ನ ಲಾರಿ ಮಗುಚಿ ಬಿದ್ದ ಘಟನೆ ಸೋಮವಾರ ಬಂಟ್ವಾಳ ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಮೂರ್ಜೆ ಸಮೀಪದ ಕುದ್ರೋಟಿಕಟ್ಟೆಯಲ್ಲಿ ಸಂಭವಿಸಿದೆ.
ಆರ್‌ಎಎಫ್‌ನ ಲಗೇಜು ತುಂಬಿದ ಲಾರಿ ಭದ್ರಾವತಿಯಿಂದ ಬಿ.ಸಿ. ರೋಡ್‌ಗೆ ಬರುತ್ತಿದ್ದಾಗ ಕುದ್ರೋಟಿಕಟ್ಟೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಚಾಲಕ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ. ಮತ್ತೋರ್ವ ಸಿಬಂದಿ ಸಾಂತಪ್ಪ ನಾಯಕ್ ಅವರನ್ನು ಮಂಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
- Advertisement -