Saturday, April 27, 2024
spot_imgspot_img
spot_imgspot_img

ರಣಹದ್ದುಗಳ ವಿನಾಶ ತಡೆಗಟ್ಟಲು ಕೇಂದ್ರ ಸರ್ಕಾರದಿಂದ ಹೊಸ ಯೋಜನೆ

- Advertisement -G L Acharya panikkar
- Advertisement -

ನವದೆಹಲಿ: ಪರಿಸರ ಶುಚೀಕರಣದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ ರಣಹದ್ದುಗಳ ವಿನಾಶ ತಡೆಗಟ್ಟಲು ಕೇಂದ್ರ ಸರ್ಕಾರ ಹೊಸ ಯೋಜನೆಯೊಂದನ್ನು ಪ್ರಕಟಿಸಿದೆ. ಸತ್ತ ಪ್ರಾಣಿಗಳೇ ಈ ರಣಹದ್ದುಗಳ ಮುಖ್ಯ ಆಹಾರ. ಇದರಿಂದಾಗಿ ಅಪಾಯಕಾರಿ ವೈರಸ್ ಗಳು ಹರಡುವುದನ್ನು ಈ ರಣಹದ್ದುಗಳು ತಡೆಯುತ್ತವೆ. ಮನುಷ್ಯರನ್ನು ಅಪಾಯದಿಂದ ರಕ್ಷಿಸುತ್ತಿದೆ.

ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ರಣಹದ್ದುಗಳ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ. ಮೂರು ಪ್ರಭೇದದ ರಣಹದ್ದುಗಳು ಶೇಕಡ 99ರಷ್ಟು ಕಣ್ಮರೆಯಾಗಿದೆ ಎಂದು ವರದಿಯಾಗಿದೆ.

1980ರ ವೇಳೆ ದೇಶದಲ್ಲಿ 4 ಕೋಟಿ ಯಷ್ಟು ರಣಹದ್ದುಗಳಿದ್ದವು . ಆದರೆ ಇವುಗಳಲ್ಲಿ ಶೇಕಡ 90ರಷ್ಟು ಕಣ್ಮರೆಯಾಗಿದೆ. ರಣಹದ್ದುಗಳಿಗೆ ಮಾರಕವಾಗುತ್ತಿರುವ ಕೆಲವು ಔಷಧಿ ಬ್ಯಾನ್ ಮಾಡಲು ಕೂಡ ತೀರ್ಮಾನಿಸಲಾಗಿದೆ.

ಈ ಔಷಧಿಯ ಅಂಶ ಹೊಂದಿರುವ ಪ್ರಾಣಿಗಳನ್ನು ರಣಹದ್ದುಗಳು ತಿಂದರೆ ಅವುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿವೆ ಎಂಬುದು ಸಾಬೀತಾಗಿದೆ.

ಹೊಸದಾಗಿ 5 ರಣಹದ್ದು ಸಂರಕ್ಷಣಾ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ 207 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ.

- Advertisement -

Related news

error: Content is protected !!