Saturday, June 13, 2026
spot_imgspot_img
spot_imgspot_img

ನೀರಿನ ಟ್ಯಾಂಕ್‍ಗೆ ಬೈಕ್ ಡಿಕ್ಕಿ – ಸವಾರರಿಬ್ಬರು ಮೃತ್ಯು

- Advertisement -
- Advertisement -

ರಾಯಚೂರು: ರಸ್ತೆ ಪಕ್ಕದಲ್ಲಿದ್ದ ನೀರಿನ ಟ್ಯಾಂಕ್‍ಗೆ ಬೈಕ್ ಡಿಕ್ಕಿ ಹೊಡೆದು ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಆಲ್ಕೋಡ್ ಗ್ರಾಮದ ಬಳಿ ನಡೆದಿದೆ.

ದೇವರಾಜ (20) ಹಾಗೂ ಆಂಜನೇಯ (18) ಮೃತ ದುರ್ದೈವಿಗಳು. ಇನ್ನೋರ್ವ ಯುವಕ ನಾಗರಾಜ್‍ಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ರೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ದೇವದುರ್ಗ ತಾಲೂಕಿನ ಅಡಕಲಗುಡ್ಡ ಗ್ರಾಮದವರು. ಸ್ವಗ್ರಾಮಕ್ಕೆ ಮರಳುವಾಗ ರಸ್ತೆ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ಅಪಘಾತವಾಗಿದೆ.ಘಟನೆ ಹಿನ್ನೆಲೆ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!