- Advertisement -
- Advertisement -


ರಾಯಚೂರು: ಪ್ರೀತಿಸಿ ಮದುವೆಯಾದ ಯುವತಿ ತನ್ನಿಂದ ದೂರವಾಗಿದ್ದಕ್ಕೆ ನೊಂದ ಯುವಕ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿ ಬಳಿಕ ಆತ್ಮಹತ್ಯೆಗೆ ಶರಣಾದ ಘಟನೆ ರಾಯಚೂರಿನ ಗಾಣದಾಳದಲ್ಲಿ ನಡೆದಿದೆ.

ಯುವತಿ ಸಂಧ್ಯಾ ಹಾಗೂ ಭೀಮೇಶ್ ನಾಯಕ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಅಂತರ್ಜಾತಿಯಾಗಿದ್ದರಿಂದ ಕುಟುಂಬದವರು ವಿವಾಹಕ್ಕೆ ಒಪ್ಪಿರಲಿಲ್ಲ. ಆದರೂ ಯುವಕ ಹಾಗೂ ಯುವತಿ ಮದುವೆಯಾಗಿದ್ದರು. ಈ ಪ್ರಕರಣ ಇಡಪನೂರು ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು.
ವಿಚಾರಣೆಗೆಂದು ನವದಂಪತಿಯನ್ನು ಠಾಣೆಗೆ ಕರೆದ ಪೊಲೀಸರು ಯುವತಿಯನ್ನು ಯುವಕನಿಂದ ಬೇರ್ಪಡಿಸಿ ಪೋಷಕರ ಕೈಗೊಪ್ಪಿಸಿದ್ದರು. ಈ ಘಟನೆಯಿಂದ ನೊಂದ ಯುವಕ ಡೆತ್ ನೋಟ್ ಬರೆದಿಟ್ಟು, ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

- Advertisement -








