Thursday, April 25, 2024
spot_imgspot_img
spot_imgspot_img

RCB IPL 2022ರ ನಾಯಕತ್ವ ವಹಿಸಲಿದ್ದಾರೆ ಮನೀಶ್ ಪಾಂಡೆ

- Advertisement -G L Acharya panikkar
- Advertisement -
vtv vitla
vtv vitla

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹಲವು ವರ್ಷಗಳ ಬಳಿಕ ಇದೀಗ ಮೆಗಾ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಈ ಬಾರಿ ಯಾವ ಆಟಗಾರ ಯಾವ ತಂಡ ಪಾಲಾಗುತ್ತಾರೆ ಅನ್ನೋ ಕುತೂಹಲ ಗರಿಗೆದರಿದೆ.

vtv vitla
IPL 2021: List Of Records Held By Virat Kohli As RCB Captain So Far

ಇದೀಗ ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ ತಂಡದ ನಾಯಕ ವಿರಾಟ್‌ ಕೊಯ್ಲಿ ನಾಯಕತ್ವ ತ್ಯಜಿಸಿದ ಬೆನ್ನಲ್ಲೇ ಆರ್‌ಸಿಬಿಯ ಮುಂದಿನ ನಾಯಕ ಯಾರು ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಇದೀಗ ವಿರಾಟ್‌ ಕೊಯ್ಲಿ ನಂತರದಲ್ಲಿ ಐಪಿಎಲ್ 2022ಕ್ಕೆ ಕನ್ನಡಿಗ ಮನೀಶ್ ಪಾಂಡೆ ಅವರನ್ನು ಆರ್‌ಸಿಬಿ ನಾಯಕರನ್ನಾಗಿ ಆಯ್ಕೆ ಎಂಬ ಮಾತು ಇದೀಗ ಆರ್‌ಸಿಬಿಯಿಂದ ಕೇಳಿಬಂದಿದೆ.

ಹಲವು ವರ್ಷಗಳ ಕಾಲ ಆರ್‌ಸಿಬಿ ತಂಡವನ್ನು ವಿರಾಟ್‌ ಕೊಯ್ಲಿ ಮುನ್ನಡೆಸಿದ್ದಾರೆ. ನಾಯಕತ್ವದ ಕೆಳಗಿಳಿಯುವ ಹೊತ್ತಲ್ಲೇ ನಾನು ತಂಡದಲ್ಲಿ ಮುಂದುವರಿಯುವುದಾಗಿ ಹೇಳಿದ್ದರು. ಅಂತೆಯೇ ನಡೆದುಕೊಳ್ಳುತ್ತಿದ್ದಾರೆ.

ಇದೀಗ ಐಪಿಎಲ್‌ನಲ್ಲಿ ಪ್ರಥಮ ಶತಕ ಸಿಡಿಸಿರುವ ಕನ್ನಡಿಗ ಮನೀಶ್‌ ಪಾಂಡೆ ಈ ಬಾರಿ ತವರು ತಂಡವನ್ನು ಸೇರುವುದು ಬಹುತೇಕ ಖಚಿತ. ಈಗಾಗಲೇ ದೇಶೀಯ ಪಂದ್ಯಗಳಲ್ಲಿ ಕರ್ನಾಟಕ ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸುತ್ತಿರುವ ಮನೀಶ್‌ ಪಾಂಡೆ ಈ ಬಾರಿ ಆರ್‌ಸಿಬಿ ತಂಡವನ್ನು ಮುನ್ನಡೆಸಲಿದ್ದಾರೆ.

ವರದಿಯ ಪ್ರಕಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಮನೀಶ್ ಪಾಂಡೆಯನ್ನು ಬಿಡ್ ಮಾಡಲು ಯೋಜಿಸುತ್ತಿದೆ. ಕರ್ನಾಟಕದ ಆಟಗಾರನನ್ನು 2018 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಬರೋಬ್ಬರಿ 11 ಕೋಟಿಗೆ ಖರೀದಿಸಿತು.

vtv vitla

ಮನೀಶ್‌ ಪಾಂಡೆ ಅದ್ಬುತ ಫಾರ್ಮ್‌ನಲ್ಲಿದ್ದ ಸಂದರ್ಭದಲ್ಲಿಯೂ ಸನ್‌ರೈಸಸ್‌ ಹೈದ್ರಾಬಾದ್‌ ತಂಡ ಆಡುವ ಬಳಗದಿಂದ ಅವರನ್ನು ಕೈಬಿಟ್ಟಿತ್ತು. ಈ ಹಿಂದೆ ಸನ್‌ರೈಸಸ್‌ ಹೈದ್ರಾಬಾದ್‌ ತಂಡವನ್ನು ನಾಯಕನ ಅನುಪಸ್ಥಿತಿಯಲ್ಲಿ ಮನೀಶ್ ಪಾಂಡೆ ಮುನ್ನಡೆಸಿದ್ದರು.

ಮನೀಶ್ ಪಾಂಡೆ ನೇತೃತ್ವದಲ್ಲಿ ಕರ್ನಾಟಕದ ತಂಡ ಸೈಯದ್ ಮುಷ್ತಾಕ್ ಟೂರ್ನಮೆಂಟ್ ನಲ್ಲಿ ಫೈನಲ್ ಪ್ರವೇಶಿಸಿದೆ. ಅಲ್ಲದೇ ಟೂರ್ನಿಯಲ್ಲಿಕರ್ನಾಟಕದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಖ್ಯಾತಿಯನ್ನು ಮನೀಷ್ ಪಾಂಡೆ ಪಡೆದುಕೊಂಡಿದ್ದಾರೆ.

aಮನೀಶ್ ಪಾಂಡೆ ಒಟ್ಟು 9 ಪಂದ್ಯಗಳಲ್ಲಿ 272 ರನ್ ಗಳಿಸಿದ್ದರು. ಇನ್ನಿಂಗ್ಸ್ 3 ಅರ್ಧಶತಕಗಳು ಒಳಗೊಂಡಿದೆ. ನಾಯಕನಾಗಿ ಪಾಂಡೆ ಅದ್ಬುತ ಪ್ರದರ್ಶನ ನೀಡಿದ್ದಾರೆ. ಇದೇ ಕಾರಣಕ್ಕೆ ಮನೀಶ್‌ ಪಾಂಡೆಯನ್ನು ಸೆಳೆಯಲು ಆರ್‌ಸಿಬಿ ಲೆಕ್ಕಾಚಾರ ಹಾಕಿಕೊಂಡಿದೆ.

vtv vitla
vtv vitla
vtv vitla
vtv vitla
- Advertisement -

Related news

error: Content is protected !!