Wednesday, June 17, 2026
spot_imgspot_img
spot_imgspot_img

ರಿಕ್ಷಾ- ಕಾರು ಡಿಕ್ಕಿ; ಮಹಿಳೆ ಮೃತ್ಯು..!

- Advertisement -
- Advertisement -

ಶಿರ್ವಾ: ಕಾರೊಂದು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿ ಇದ್ದ ಪ್ರಯಾಣಿಕ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೆಳ್ಳೆ ಗ್ರಾಮದ ಪಾಜಕ ಕ್ಷೇತ್ರದ ದ್ವಾರದ ಬಳಿ ನಡೆದಿದೆ.

ಮೃತಪಟ್ಟ ಮಹಿಳೆಯನ್ನು ಬೆಳ್ಳೆ ಗ್ರಾಮದ ಆಗ್ನೆಸ್ ನೊರೊನ್ಹಾ (76) ಎಂದು ಗುರುತಿಸಲಾಗಿದೆ. ಗಾಯಗೊಂಡ ರಿಕ್ಷಾ ಚಾಲಕ ಸುರೇಶ್, ಮೃತರ ಅಕ್ಕನ ಮಗಳು ಜೆಸಿಂತಾ ಮೆನೇಜಸ್(51), ಕಾರು ಚಾಲಕ ಮನೋಜ್ ಹಾಗೂ ಕಾರಿನಲ್ಲಿದ್ದ ದಾನಪ್ಪರಾಥೋಡ್ ಉಡುಪಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಡುಬೆಳ್ಳೆಯಿಂದ ಸುಭಾಸ್‌ನಗರಕ್ಕೆ ಹೋಗುತ್ತಿದ್ದ ರಿಕ್ಷಾಕ್ಕೆ ಎದುರಿನಿಂದ ಬರುತ್ತಿದ್ದ ಕಾರು ಓವರ್‌ಟೇಕ್ ಮಾಡುವ ಭರದಲ್ಲಿ ಢಿಕ್ಕಿ ಹೊಡೆದಿದ್ದು, ಪರಿಣಾಮ ರಿಕ್ಷಾದಿಂದ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡ ಜೆಸಿಂತಾ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!