- Advertisement -
- Advertisement -

ಮಂಗಳೂರು: ಕರಾವಳಿಗರೇ ಹುಷಾರ್. ಕಾರಿನ ಗಾಜು ಒಡೆದು, ನಗದು, ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡುವ ಗ್ಯಾಂಗ್‌ವೊಂದು ಸಕ್ರೀಯವಾಗಿದೆ ಎಂದು ಮಂಗಳೂರು ನಗರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಮಂಗಳೂರು, ಉಡುಪಿ ನಗರದ ಹಲವು ಕಡೆಗಳಲ್ಲಿ ದರೋಡೆಕೋರರ ಗ್ಯಾಂಗ್ ಸಕ್ರೀಯವಾಗಿದೆ. ಮಂಗಳೂರಿನ ಉರ್ವಸ್ಟೋರ್, ಬಂದರು ಪೊಲೀಸ್ ಠಾಣೆಯ ಬಲ್ಮಠದಲ್ಲಿ ದರೋಡೆ ಪ್ರಕರಣ ನಡೆದಿದೆ. ಕಾರಿ ಗಾಜು ಒಡೆದು ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ಗ್ಯಾಂಗ್ ದೋಚಿದೆ.
ಉತ್ತರ ಭಾರತದಿಂದ ಬಂದಿರುವ ದರೋಡೆ ಗ್ಯಾಂಗ್ ಈ ಕೃತ್ಯವನ್ನು ಎಸಗಿರುವ ಶಂಕೆ ವ್ಯಕ್ತವಾಗುತ್ತಿದ್ದು, ಈ ನಿಟ್ಟಿನಲ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಪತ್ತೆಯಾಗುತ್ತಿದ್ದು, ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಪೊಲೀಸರಿಗೆ ದೂರು ನೀಡಬಹುದಾಗಿದೆ.




- Advertisement -








