Monday, May 6, 2024
spot_imgspot_img
spot_imgspot_img

ವಿಟ್ಲ: ಬ್ರಿಡ್ಜ್ ಕೆಲಸಕ್ಕೆ ತಂದಿಟ್ಟಿದ್ದ ರಾಡು, ಪ್ಲೇಟ್ಸ್ ಹಾಗೂ ಇತರ ಸಾಮಗ್ರಿಗಳು ಕಳವು

- Advertisement -G L Acharya panikkar
- Advertisement -
vtv vitla

ವಿಟ್ಲ: ಬ್ರಿಡ್ಜ್ ಕೆಲಸಕ್ಕೆ ತಂದಿಟ್ಟಿದ್ದ ರಾಡು, ಪ್ಲೇಟ್ಸ್ ಹಾಗೂ ಇತರ ಸಾಮಗ್ರಿಗಳು ಕಳವಾದ ಘಟನೆ ಮಾಣಿಯಲ್ಲಿ ನಡೆದಿದ್ದು, ನಂದಕುಮಾರ್‌ ನೀಡಿದ ದೂರಿನಂತೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ತಾಲೂಕು ಮಾಣಿ ಎಂಬಲ್ಲಿ ಬ್ರಿಡ್ಜ್ ಕೆಲಸ ಮಾಡಲು ತಂದು ಇಟ್ಟಿದ್ದ ರಾಡುಗಳು, ಪ್ಲೇಟ್ಸ್ ಹಾಗೂ ಇತರ ಸಾಮಗ್ರಿಗಳು ಕಳ್ಳತನವಾಗಿದ್ದು, ಸಾಮಾಗ್ರಿಗಳನ್ನು ಹುಡುಕಾಡಿದಾಗ ಮಾಣಿ ಗ್ರಾಮದ ಪಟ್ಲಕೋಡಿ ಎಂಬಲ್ಲಿ ಈಚರ್‌ ವಾಹನದಲ್ಲಿ ವ್ಯಕ್ತಿಯೋರ್ವ ತುಂಬಿಸಿಕೊಂಡಿರುವುದು ಕಂಡುಬಂದಿದ್ದು, ನಂದಕುಮಾರ್‌ ಅವರನ್ನು ಕಂಡು ಆರೋಪಿ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಕಳ್ಳತನವಾದ ಸಾಮಗ್ರಿಗಳು 5 ಟನ್ಗಳಾಗಿದ್ದು ಅಂದಾಜು ಮೌಲ್ಯ 3,50,000/- ರೂ ಆಗಿರಬಹುದು ಎನ್ನಲಾಗಿದೆ.

ಈ ಬಗ್ಗೆ, ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!