Sunday, June 7, 2026
spot_imgspot_img
spot_imgspot_img

ಅಭ್ಯಾಸದ ವೇಳೆ ರೋಹಿತ್‌ ಶರ್ಮ ಹೊಡೆದ ಸಿಕ್ಸರ್‌, ಮೈದಾನದಿಂದ ಆಚೆ ಚಲಿಸುತ್ತಿದ್ದ ಬಸ್‌ ಮೇಲೆ ಬಿದ್ದ ಚೆಂಡು ವಿಡಿಯೋ ವೈರಲ್.!

- Advertisement -
- Advertisement -

ಅಬುಧಾಬಿ:  ಟೀಮ್ ಇಂಡಿಯಾ ಸ್ಟಾರ್‌ ಓಪನರ್‌ ಮತ್ತು
ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮಾ  ತಂಡದ ಅಭ್ಯಾಸ ಶಿಬಿರದಲ್ಲಿ  ಬಾರಿಸಿದ ಸಿಕ್ಸರ್‌ ಮೈದಾನದಿಂದ ಆಚೆ ಹೋಗುತ್ತಿದ್ದ ಬಸ್‌ ಒಂದಕ್ಕೆ ಬಡಿದಿರುವ ವಿಡಿಯೋ ಈಗ ವೈರಲ್‌ ಆಗಿದೆ.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ವಿಶ್ವ ದಾಖಲೆ ಹೊಂದಿರುವ ರೋಹಿತ್‌ ಶರ್ಮಾ, ಅವರ ಈ ಜಬರ್ದಸ್ತ್‌ ಸಿಕ್ಸರ್‌ನ ವಿಡಿಯೋವನ್ನು ಮುಂಬೈ ಇಂಡಿಯನ್ಸ್‌ ತಂಡ ತನ್ನ ಸೋಷಿಯಲ್‌ ಮೀಡಿಯಾ ವೇದಿಕೆಗಳಲ್ಲಿ ಹಂಚಿಕೊಂಡಿದೆ.

ಬುಧವಾರ ಅಭ್ಯಾಸ ಮಾಡುತ್ತಿದ್ದ ಅವರು ಮುನ್ನುಗ್ಗಿ ಬಾರಿಸಿದ ಚೆಂಡು 95 ಮೀಟರ್‌ ದೂರ ಸಾಗಿ, ಮೈದಾನದಿಂದ ಹೊರಹೋಗಿದೆ. ಆಗ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್ಸಿಗೆ ಬಡಿದು ತುಸು ಹಾನಿ ಮಾಡಿದೆ.  ಯುಎಇ ಮೈದಾನಗಳು ತುಸು ಚಿಕ್ಕವು. ತೆರೆದ ಮೈದಾನದಲ್ಲಿ ಬ್ಯಾಟಿಂಗ್‌ ಅಭ್ಯಾಸ ಮಾಡುತ್ತಿದ್ದ ರೋಹಿತ್‌ ಲಾಂಗ್‌ ಆಫ್‌ ಕಡೆಗೆ ಬಾರಿಸಿದ ಸಿಕ್ಸರ್‌ ನೇರವಾಗಿ ಸ್ಟೇಡಿಯಂ ದಾಟಿದೆ.

- Advertisement -

Related news

error: Content is protected !!