Thursday, June 25, 2026
spot_imgspot_img
spot_imgspot_img

ಪತ್ನಿ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಪ್ರಿಯಕರ- ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ರೌಡಿ ಶೀಟರ್ ಗಂಡ!

- Advertisement -
- Advertisement -

ಮಂಡ್ಯ: ಪತ್ನಿ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಆಕೆಯ ಪ್ರಿಯಕರನಿಗೆ ರೌಡಿ ಶೀಟರ್ ಗಂಡ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಮಂಡ್ಯದ ಹೊಸಹಳ್ಳಿಯಲ್ಲಿ ನಡೆದಿದೆ.

ಹಲ್ಲೆಗೆ ಒಳಗಾದವರನ್ನು ಹರ್ಷಿತಾ ಮತ್ತು ಆಕೆಯ ಪ್ರಿಯಕರ ಚೇತನ್ ಎಂದು ಗುರುತಿಸಲಾಗಿದೆ. ರೌಡಿ ಶೀಟರ್ ನಾಗೇಂದ್ರ ಅಲಿಯಾಸ್ ಕುಳ್ಳನಾಗ ಪ್ರೀತಿಸಿ 8 ವರ್ಷಗಳ ಹಿಂದೆ ಹರ್ಷಿತಾಳನ್ನು ಮದುವೆಯಾಗಿದ್ದ. ದಂಪತಿಗೆ 8 ವರ್ಷದ ಮಗನಿದ್ದಾನೆ.

ಈ ನಡುವೆ ಮದುವೆ ಸಂದರ್ಭದಲ್ಲಿ ಸಹಕಾರ ಮಾಡಿದ್ದ ಚೇತನ್ ಜೊತೆಗೆ ಹರ್ಷಿತಾ ಕದ್ದು ಮುಚ್ಚಿ ಸಂಬಂಧ ಬೆಳೆಸಿದ್ದಾಳೆ ಎನ್ನಲಾಗಿದೆ. ತನ್ನ ಮನೆಯಲ್ಲಿ ಪತ್ನಿ ಹರ್ಷಿತಾ ಮತ್ತು ಪ್ರಿಯಕರ ಇಬ್ಬರೂ ಒಟ್ಟಿಗೆ ರೌಡಿ ಶೀಟರ್ ನಾಗನ ಕೈಗೆ ಸಿಕ್ಕಿ ಬಿದ್ದಿದ್ದು, ಕುಳ್ಳನಾಗ ಮತ್ತು ಆತನ ಸಹಚರ ಕಟ್ಟೆ ಯೋಗೇಶ್ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

ಈ ವೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಚೇತನ್ ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಆರೋಪಿ ಕುಳ್ಳನಾಗ ಹಾಗೂ ಯೋಗೇಶ್ ನನ್ನು ಮಂಡ್ಯ ಪೂರ್ವ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕುಳ್ಳ ನಾಗನಿಗೆ ಕೊರೋನಾ ಸೋಂಕಿರುವುದು ಗೊತ್ತಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Related news

error: Content is protected !!