Friday, March 29, 2024
spot_imgspot_img
spot_imgspot_img

ಆರ್ ಆರ್ ನಗರ ಉಪಚುನಾವಣೆ; ಚುನಾವಣಾ ಅಧಿಕಾರಿಗಳ ಹದ್ದಿನ ಕಣ್ಣು-ಗಲ್ಲಿ ಗಲ್ಲಿಗಳಲ್ಲೂ ಫ್ಲೈಯಿಂಗ್ ಸ್ಕ್ವಾಡ್

- Advertisement -G L Acharya panikkar
- Advertisement -

ಬೆಂಗಳೂರು(ಅ.27): ಆರ್​ಆರ್​ ನಗರ ಉಪಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ಹದ್ದಿನಕಣ್ಣು ಇಟ್ಟಿದ್ದಾರೆ. ಆರ್​ಆರ್​ ನಗರಕ್ಕೆ ಪ್ರವೇಶ ಹಾಗೂ ಎಕ್ಸಿಟ್ ಆಗುವ ಕಡೆಗಳಲ್ಲಿ ಚೆಕ್​ಪೋಸ್ಟ್ ನಿರ್ಮಿಸಲಾಗಿದೆ. ಚೆಕ್​ಪೋಸ್ಟ್​​ಗಳಲ್ಲಿ ತಪಾಸಣೆಗೆ SST ತಂಡ ನಿಯೋಜನೆ ಮಾಡಲಾಗಿದೆ. ಸ್ಟಾಟಿಕ್ ಸರ್ವೈಲೆನ್ಸ್ ಟೀಂ (ಎಸ್​ಎಸ್​ಟಿ) ತಂಡದಲ್ಲಿ ಇಬ್ಬರು ಬಿಬಿಎಂಪಿ ಇಂಜಿನಿಯರ್​ಗಳು, ಇಬ್ಬರು ಪೊಲೀಸ್ ಸಿಬ್ಬಂದಿ, ಓರ್ವ ಅಬಕಾರಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಂದು ಚೆಕ್​ಪೋಸ್ಟ್​ನಲ್ಲಿ 5 ಮಂದಿ ಸಿಬ್ಬಂದಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

ಆರ್​ಆರ್​ ನಗರದ 9 ಕಡೆಗಳಲ್ಲಿ ಚೆಕ್​ಪೋಸ್ಟ್ ನಿರ್ಮಿಸಲಾಗಿದೆ. ಐಡಿಯಲ್ ಹೋಮ್ಸ್‌ (ಆರ್.ಆರ್.ನಗರ ಆರ್ಚ್ ಎಂಟ್ರೆನ್ಸ್), SVK ಕಲ್ಯಾಣಮಂಟಪ ರಸ್ತೆ (80 ಫೀಟ್ ರಿಂಗ್ ರೋಡ್, ಜ್ಞಾನ ಜ್ಯೊತಿ‌ನಗರ), ರಿಲಯನ್ಸ್ ಫ್ರೆಶ್ ಹತ್ತಿರ (ಡಿ ಗ್ರೂಪ್ ಲೇಔಟ್ ಮುದ್ದಿನ ಪಾಳ್ಯ), ಆದೀಶ್ವರ ಶೋ ರೂಮ್ ( ಮಾಗಡಿ ಮೈನ್ ರೋಡ್ ಸುಂಕದಕಟ್ಟೆ), HMT ಸರ್ವಿಸ್ ರಸ್ತೆ, ಯೂಕೋ ಬ್ಯಾಂಕ್ ಹತ್ತಿರ ಜಾಲಹಳ್ಳಿ, ಕೂಲಿನಗರ ಬ್ರಿಡ್ಜ್, ಲಗ್ಗೆರೆ ವಾರ್ಡ್ (ನಂದಿನಿ ಲೇಔಟ್), ಶಂಕರ ನಗರ ರೈಲ್ವೇ ಗೇಟ್ ಹತ್ತಿರ (ರಾಮಯ್ಯ ಸಮಾಧಿ, ಜೆಪಿ ಪಾರ್ಕ್ ಮತ್ತಿಕೆರೆ), ಉತ್ತರ ಹಳ್ಳಿ ಚೆನ್ನಸಂದ್ರ ಮೈನ್ ರೋಡ್, ಮೆಟ್ರೊ ರೈಲ್ವೆ ಸ್ಟೇಷನ್ (ಪೀಣ್ಯಾ) ಭಾಗಗಳಲ್ಲಿ ಚೆಕ್​ಪೋಸ್ಟ್​ ನಿರ್ಮಿಸಲಾಗಿದೆ.9 ಚೆಕ್​ಪೋಸ್ಟ್​ಗಳಲ್ಲಿ 45 ಮಂದಿ ಸರ್ಕಾರಿ ಸಿಬ್ಬಂದಿ ಮೂರು ಶಿಫ್ಟ್ ಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಚೆಕ್​ಪೋಸ್ಟ್​ಗಳಲ್ಲಿ SST ಟೀಂ ಹೊರತಾಗಿ ಏರಿಯಾದ ಗಲ್ಲಿ ಗಲ್ಲಿಗಳಲ್ಲಿ‌ ಫ್ಲೈಯಿಂಗ್ ಸ್ಕ್ವಾಡ್ ಓಡಾಡುತ್ತಿದ್ದಾರೆ.

- Advertisement -

Related news

error: Content is protected !!