Tuesday, June 16, 2026
spot_imgspot_img
spot_imgspot_img

ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ಬಗ್ಗೆ ತಿಳಿದುಕೊಳ್ಳಬೇಕಾದ್ರೆ ಶಾಖೆಗೆ ಬರಲಿ: ಸಿ.ಟಿ ರವಿ

- Advertisement -
- Advertisement -

ಬೆಂಗಳೂರು: ಪ್ರಿಯಾಂಕ್ ಖರ್ಗೆ ಅವರಿಗೆ ಆರ್‌ಎಸ್‌ಎಸ್ ಬಗ್ಗೆ ತಿಳಿದುಕೊಳ್ಳಬೇಕಾದರೆ ಸಂಘದ ಶಾಖೆಗೆ ಬರಲಿ ಎಂದು ಬಿಜೆಪಿ ನಾಯಕ ಸಿಟಿ ರವಿ ಪ್ರಿಯಾಂಕ್ ಖರ್ಗೆ ಅವರಿಗೆ ಬಹಿರಂಗ ಆಹ್ವಾನ ನೀಡಿದ್ದಾರೆ.

ಮೋಹನ್ ಭಾಗವತ್‌ರಿಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಪ್ರಿಯಾಂಕ್ ಖರ್ಗೆ ಗೃಹ ಸಚಿವರಾಗಿ ಪತ್ರ ಬರೆದಿದ್ದರೆ ಸರ್ಕಾರದಲ್ಲೇ ಅದಕ್ಕೆ ದಾಖಲೆ ಇವೆ. ಆರ್‌ಎಸ್‌ಎಸ್ ಅನ್ನು 3 ಬಾರಿ ನಿಷೇಧಕ್ಕೆ ಹಾಕಲಾಗಿತ್ತು. 2 ಬಾರಿ ಕೋರ್ಟ್ ನಿಷೇಧ ವಾಪಸ್ ಪಡೆದಿತ್ತು. ಒಮ್ಮೆ ಸರ್ಕಾರ ನಿಷೇಧ ವಾಪಸ್ ಪಡೆದಿತ್ತು. ನಿಮ್ಮ ಪ್ರಶ್ನೆಗಳಿಗೆ ಸರ್ಕಾರ ಮತ್ತು ನ್ಯಾಯಾಲಯದ ಹಂತದಲ್ಲಿ ಚರ್ಚೆ ಆಗಿದೆ. ಸಂವಿಧಾನದಲ್ಲಿ ನೋಂದಣಿ, ನೋಂದಣಿ ರಹಿತವಾಗಿ ನಡೆಸಲು ಅವಕಾಶ ಮಾಡಿ ಕೊಟ್ಟಿದೆ ಎಂದು ತಿಳಿಸಿದರು.

ಸಂಘ ಆರ್ಥಿಕ ಸಹಾಯ ಪಡೆದಿದ್ದರೆ, ಸೊಸೈಟಿ, ಪಕ್ಷ ಇದ್ದರೆ, ಟ್ರಸ್ಟ್ ಇದ್ದರೆ ಮಾತ್ರ ರಿಜಿಸ್ಟರ್ ಅಗಬೇಕು. ಆರ್‌ಎಸ್‌ಎಸ್ ಸೊಸೈಟಿ, ಟ್ರಸ್ಟ್, ಕಂಪನಿ ಅಲ್ಲ. ವ್ಯಕ್ತಿಗೆ ರಾಷ್ಟ್ರಭಕ್ತಿ ಕೊಡುವ ಸಂಸ್ಥೆ. ಹೀಗಾಗಿ ರಿಜಿಸ್ಟರ್ ಮಾಡಿಸೋ ಅವಶ್ಯಕತೆ ಇಲ್ಲ ಎಂದರು.

ಸಂಘದ ಬಗ್ಗೆ ಕುತೂಹಲ ಇದ್ದರೆ ಪ್ರಿಯಾಂಕ್ ಖರ್ಗೆ ಬಂದು ಶಾಖೆ ನೋಡಲಿ. ಶಾಖೆಗೆ ಬಂದು ಹಾಡು, ಆಟ, ಅಮೃತ ವಚನ ಕೇಳಬಹುದು. ಯಾವುದೇ ಶಾಖೆಗೆ ಹೋಗಿ ಸಂಘದ ಬಗ್ಗೆ ತಿಳಿದುಕೊಳ್ಳಿ ಎಂದು ಆಹ್ವಾನ ನೀಡಿದರು.

100 ವರ್ಷದಿಂದ ಸಂಘದ ಬಗ್ಗೆ ಅಪಪ್ರಚಾರ ಮಾಡುವ ಕೆಲಸ ಮಾಡುತ್ತಿದೆ. ಪೂರ್ವಾಗ್ರಹ ಪೀಡಿತವಾಗಿ, ದ್ವೇಷದಿಂದ ಇದ್ದರೆ ಸಂಘದ ಬಗ್ಗೆ ಏನು ಹೇಳಿದ್ರು ಅರ್ಥ ಆಗಲ್ಲ. ಶಾಖೆಗೆ ಬಂದರೆ ಇವರ ಅಹಂಗೆ ಧಕ್ಕೆ ಆಗಬಹುದು. ಶಾಖೆಗೆ ಬಂದರೆ ಅಹಂಕಾರ ಕಡಿಮೆ ಆಗುತ್ತದೆ. ಮೋಹನ್ ಭಾಗವತ್ ಉತ್ತರ ಕೊಟ್ಟಿದ್ದಾರೆ. ಯಾಕೆ ನೋಂದಣಿ ಆಗಿಲ್ಲ, ಮುಕ್ತ ಮನಸು ಇದ್ದರೆ ಶಾಖೆಗೆ ಬಂದು ಪ್ರಿಯಾಂಕ್ ಖರ್ಗೆ ನೋಡಲಿ ಎಂದು ಸಿ ಟಿ ರವಿ ತಿಳಿಸಿದರು.

- Advertisement -

Related news

error: Content is protected !!