- Advertisement -
- Advertisement -
ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌ನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರ್ತವ್ಯ ನಿರ್ವಹಿಸುತ್ತಿದ್ದ ಮೋನಪ್ಪ ಗೌಡ.ಕೆ ಅವರು ವಯೋನಿವೃತ್ತರಾಗಿದ್ದು, ಅವರಿಗೆ ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ವತಿಯಿಂದ ಬೀಳ್ಕೊಡುಗೆ ಸಮಾರಂಭವು ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷ ಜಗನ್ನಾಥ ಸಾಲಿಯಾನ್.ಹೆಚ್ ಅವರು ವಹಿಸಿದ್ದರು. ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಮೋಹನ್ ಕೆ.ಎಸ್ ಹಾಗೂ ಆಡಳಿತ ಮಂಡಳಿ ಸದಸ್ಯ ಮನೋರಂಜನ್.ಕೆ.ಎಸ್, ಉದಯಕುಮಾರ್.ಎ, ಶ್ರೀ ಕೃಷ್ಣ.ಕೆ, ದಿವಾಕರ.ವಿ, ದಯಾನಂದ ಆಳ್ವ, ಸುಂದರ.ಡಿ, ವಿಶ್ವನಾಥ.ಎಂ, ಗೋವರ್ಧನ್ ಕುಮಾರ್,ಬಾಲಕೃಷ್ಣ.ಪಿ.ಎಸ್, ಶುಭಲಕ್ಷ್ಮಿ ಇವರು ಉಪಸ್ಥಿತರಿದ್ದರು.
ಶ್ರೀನಿಧಿ ವಿ ಕುಡ್ವ ಪ್ರಾರ್ಥಿಸಿದರು. ಮುಖ್ಯಕಾರ್ಯನಿರ್ವಾಹಕ ಕೃಷ್ಣ ಮುರಳಿ ಶ್ಯಾಂ.ಕೆ ಅವರು ಸ್ವಾಗತಿಸಿದರು. ಉಪಾಧ್ಯಕ್ಷ ಮೋಹನ್ ಕೆ.ಎಸ್. ಪ್ರಸ್ತಾವನೆ ಮಾಡಿದರು. ವಿಶ್ವನಾಥ.ಎಂ ವಂದಿಸಿದರು. ಮಹೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
,,,,,,,
- Advertisement -