Wednesday, April 23, 2025
spot_imgspot_img
spot_imgspot_img

ರಷ್ಯಾ-ಉಕ್ರೇನ್‌ ಯುದ್ಧ; ಅಮೆರಿಕದ ಕದನ ವಿರಾಮ ಪ್ರಸ್ತಾಪಕ್ಕೆ ರಷ್ಯಾ ಒಪ್ಪಿಗೆ

- Advertisement -
- Advertisement -

ಮಾಸ್ಕೋ: ಉಕ್ರೇನ್‌ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾವು ಅಮೆರಿಕದ ಕದನ ವಿರಾಮ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದೆ.

ಷರತ್ತುಬದ್ಧ ಒಪ್ಪಿಗೆ ಸೂಚಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಒಪ್ಪಿಗೆ ಜೊತೆಗೆ ಹಲವು ಬೇಡಿಕೆಗಳನ್ನೂ ಮುಂದಿಟ್ಟಿದ್ದಾರೆ. ಕದನ ವಿರಾಮವು ಶಾಶ್ವತ ಶಾಂತಿಗೆ ಕಾರಣವಾಗಬೇಕು. ಸಂಘರ್ಷದ ಮೂಲ ಕಾರಣಗಳನ್ನು ಪರಿಹರಿಸಬೇಕು. ಯುದ್ಧ ವಿರಾಮ ಉಕ್ರೇನ್ ಮತ್ತೆ ಸಶಸ್ತ್ರೀಕರಣಗೊಳ್ಳಲು ಅವಕಾಶ ನೀಡಬಹುದು. ತನ್ನ ಸೇನೆಯನ್ನು ಮತ್ತೆ ಸಜ್ಜುಗೊಳಿಸಲು ಸಹಕಾರಿಯಾಗಬಹುದು ಎಂದು ಪುಟಿನ್‌ ಬೇಡಿಕೆ ಮುಂದಿಟ್ಟಿದ್ದಾರೆ.

ರಷ್ಯಾದ 2,000 ಕಿಲೋಮೀಟರ್ ವ್ಯಾಪ್ತಿಯಲ್ಲಿ ಉಕ್ರೇನ್ ಸೇನೆ ಸಾಕಷ್ಟು ನಷ್ಟ ಮಾಡಿದೆ. ಬಂಧಿತ ಸೈನಿಕರನ್ನು ಹಾಗೇ ಹೋಗಲು ಬಿಡಬೇಕೇ? ಉಕ್ರೇನ್ ಅವರಿಗೆ ಶರಣಾಗಲು ಸೂಚಿಸುತ್ತದೆಯೇ? ಅಮೆರಿಕದ ಅಧಿಕಾರಿಗಳು ಅಥವಾ ಟ್ರಂಪ್ ಜೊತೆಗೆ ಮಾತುಕತೆಗೆ ಸಿದ್ಧ. ಸಂಘರ್ಷವನ್ನು ಶಾಂತಿಯುತವಾಗಿ ಕೊನೆಗೊಳಿಸಲು ನಾವು ಸಿದ್ಧ ಎಂದು ಕದನ ವಿರಾಮ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸುತ್ತಲೇ ರಷ್ಯಾ ಹಲವು ಬೇಡಿಕೆಗಳನ್ನು ಮುಂದಿಟ್ಟಿದೆ.

- Advertisement -

Related news

error: Content is protected !!