Friday, April 19, 2024
spot_imgspot_img
spot_imgspot_img

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಹಾಗೂ ಇಶ್ಕೇ ಮದೀನ ಮಸ್ಕಾನ್ ಅಕಾಡೆಮಿ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ ಹಾಗೂ ಉಚಿತ ಮುಂಜಿ (ಸುನ್ನತ್)

- Advertisement -G L Acharya panikkar
- Advertisement -

ಸಕಲೇಶಪುರ: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ ಇಶ್ಕೇ ಮದೀನ ಮಸ್ಕಾನ್ ಅಕಾಡೆಮಿ ಜಂಟಿ ಆಶ್ರಯದಲ್ಲಿ ಹಾಸನ ರಕ್ತನಿಧಿ ಇದರ ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ಹಾಗೂ ಉಚಿತ ಮುಂಜಿ (ಸುನ್ನತ್) ಕಾರ್ಯಕ್ರಮ ಭಾನುವಾರ ಸಕಲೇಶಪುರ ಪುರಭವನದಲ್ಲಿ ನಡೆಯಿತು.

ಸಕಲೇಶಪುರ ಬದ್ರಿಯಾ ಜುಮಾ ಮಸೀದಿ ಅದ್ಯಕ್ಷ ಝಾಕಿರ್ ಯಾದಗೀರ್ ಕಾರ್ಯಕ್ರಮವನ್ನು ಉಧ್ಘಾಟಿಸಿದರು. ನಂಡೆ ಪೆಂಙಳ್ ಅಧ್ಯಕ್ಷ ನೌಶಾದ್ ಹಾಜಿ ಸುರಲ್ಪಾಡಿ ಅಧ್ಯಕ್ಷತೆ ವಹಿಸಿದ್ದರು.

ಇಶ್ಕೇ ಮದೀನ ಮಶ್ಕಾನ್ ಅಕಾಡೆಮಿ ಅಶ್ರಫ್ ಸಖಾಫಿ ದುಃಹಾ ಆರ್ಶೀವಚನಗೈದರು. ಮುಖ್ಯ ಅತಿಥಿಗಳಾಗಿ ಪೋಕರ್ ಆನೆಮಹಲ್, ಆಸೀಫ್ ಆದರ್ಶ್, ಆದಂ ಹಾಜಿ, ಅಕ್ಬರ್, ಡಾ.ಕಾಂತರಾಜ್ ಮೊದಲಾದವರು ಭಾಗವಹಿಸಿದ್ದರು. ಒಟ್ಟು 31 ಮಂದಿ ರಕ್ತದಾನ ಮಾಡಿದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಹಾಸನ ರಕ್ತನಿಧಿ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.

ಕಾರ್ಯಕ್ರಮದ ಅಂಗವಾಗಿ ನಡೆದ ಉಚಿತ ಮುಂಜಿ (ಸುನ್ನತ್) ಕಾರ್ಯಕ್ರಮದಲ್ಲಿ 15 ಮಕ್ಕಳು ಪಾಲ್ಗೊಂಡರು. ಅಡ್ಡೂರು ರಿಫಾ ಪಾಲಿ ಕ್ಲಿನಿಕ್ ನ ಸಿದ್ದೀಕ್ ಅಡ್ಡೂರು ಮುಂಜಿ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು. ಹಮೀದ್ ದಾರಿಮಿ ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಸ್ವಾಗತಿಸಿದರು. ಮುನೀರ್ ಮುಸ್ಲಿಯಾರ್ ಕಿರಾಅತ್ ಪಠಿಸಿದರು. ಅಶ್ರಫ್ ಅರಬಿ ಕಲ್ಲಡ್ಕ ಕಾರ್ಯಕ್ರಮನ್ನು ನಿರೂಪಿಸಿದರು.

- Advertisement -

Related news

error: Content is protected !!