Friday, April 19, 2024
spot_imgspot_img
spot_imgspot_img

ಕುಖ್ಯಾತ ಅಂತರ್ ಜಿಲ್ಲಾ ವಾಹನ ಕಳ್ಳರ ಬಂಧನ- ಲಕ್ಷಾಂತರ ಮೌಲ್ಯದ 20 ವಾಹನಗಳ ವಶ !

- Advertisement -G L Acharya panikkar
- Advertisement -

ಪುತ್ತೂರು: ನಾಲ್ಕು ಚಕ್ರದ ವಾಹನಗಳನ್ನು ಕಳವು ಮಾಡುತ್ತಿದ್ದ 6 ಜನ ಕಳ್ಳರನ್ನು ಬಂಧಿಸಿ ಅವರಿಂದ 44 ಲಕ್ಷ ಬೆಲೆ ಬಾಳುವ 20 ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಸಕಲೇಶಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಪೋಲಿಸರು ಬಾಳ್ಳುಪೇಟೆಯಲ್ಲಿ ವಾಹನವನ್ನು ತಪಾಸಣೆ ಮಾಡುತ್ತಿರುವಾಗ ಹಾಸನದ ಕಡೆಯಿಂದ ಮಂಗಳೂರು ಕಡೆಗೆ ಹೋಗಲು ಮಾರುತಿ 800 ಕಾರು ನಂಬರ್ ಪ್ಲೇಟ್ ಇಲ್ಲದೇ ಬರುತ್ತಿರುವುದನ್ನು ಗಮನಿಸಿ ತಡೆದು ನಿಲ್ಲಿಸಿದಾಗ ವಾಹನದ ದಾಖಲಾತಿಯನ್ನು ಹಾಜರುಪಡಿಸುವಂತೆ ಸೂಚಿಸಿದ್ದು, ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ವಾಹನದ ದಾಖಲಾತಿಯನ್ನು ಹಾಜರುಪಡಿಸಲು ವಿಫಲವಾಗಿದ್ದು, ಸಕಲೇಶಪುರ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ಕಳವು ಕೃತ್ಯ ಬೆಳಕಿಗೆ ಬಂದಿದೆ‌.

ಶಬ್ಬೀರ್, ಮೋಯ್ದು ಕುನ್ನಿ, ರಫೀಕ್, ಖಾದರ್ ಶರೀಫ್, ಸೈಯದ್ ಅಜ್ಮಲ್, ಮಹಮದ್ ಮುಬಾರಕ್ ಆರೋಪಿಗಳಾಗಿದ್ದು, ಈ ಆರೋಪಿಗಳು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಹಾಸನ, ಹೊಳೇನರಸೀಪುರ ಹಾಗೂ ಯಾತ್ರಾಸ್ಥಳವಾದ ಕುಕ್ಕೆಸುಬ್ರಹ್ಮಣ್ಯದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದ ಮಾರುತಿ ವ್ಯಾನ್, ಕಾರು ಹಾಗೂ ಬೋಲೇರೋ ವಾಹನಗಳು ಸೇರಿದಂತೆ ಇತರೆ ವಾಹನಗಳನ್ನು ನಕಲಿ ಕೀಗಳನ್ನು ಬಳಸಿ ಕಳವು ಮಾಡಿ.

ಈ ವಾಹನಗಳನ್ನು ಈ ಪ್ರಕರಣದ ಮತ್ತೊಬ್ಬ ಆರೋಪಿ ಮೈಸೂರು ಜಿಲ್ಲೆಯ ಕೆ.ಆರ್. ನಗರ ಚಿಕ್ಕಮಸೀದಿ ರಸ್ತೆ ಬಳಿ ವಾಸವಾಗಿರುವ ವೆಲ್ಡಿಂಗ್ ಕೆಲಸ ಮಾಡುವ ಅಪ್ರೋಚ್ ಖಾನ್ ನ ಮೂಲಕ ಇತರೆ ಗುಜರಿ ಅಂಗಡಿಗಳಲ್ಲಿ ಇರುತ್ತಿದ್ದ ಅಪಘಾತದಲ್ಲಿ ಸಂಪೂರ್ಣ ಜಖಂಗೊಂಡ ವಾಹನಗಳ ಚಾರ್ಸಿ ನಂಬರ್ ಇಂಜಿನ್ ನಂಬರ್‌ಗಳ ಸಹಿತವಾಗಿ ವಾಹನಗಳನ್ನು ಮಾರಾಟ ವಾಹನಗಳ ಮಾಲೀಕರು ನೀಡುತ್ತಿದ್ದ ವಾಹನ ವರ್ಗಾವಣೆಗೆ ಸಂಬಂಧಿಸಿದ ಫಾರಂ ನಂಬರುಗಳನ್ನು ಸಂಗ್ರಹಿಸಿ ಚಾರ್ಸಿ ನಂಬರ್‌ಗಳನ್ನು ಕಳವು ಮಾಡಿದ ವಾಹನಗಳಿಗೆ ಪಂಚಿಂಗ್ ಮಾಡಿ, ವಾಹನಗಳಿಗೆ ವಿಮೆಯನ್ನು ಪಾವತಿಸಿ, ನೋಂದಣಿಗೊಂಡ ಆರ್.ಟಿ.ಓ ಕಛೇರಿಯ ಮೂಲಕ ದಾಖಲೆಗಳನ್ನು ಸಿದ್ದಪಡಿಸಿ ವಾಹನ ಮಾರಾಟ ಮಾಡುತ್ತಿದ್ದರು.

ಪತ್ತೆಯಾದ ಪ್ರಕರಣಗಳು ಸಕಲೇಶಪುರದಲ್ಲಿ 1 ಮಾರುತಿ 800 ಕಾರು, ಹಾಸನ ನಗರದಲ್ಲಿ 7 ಮಾರುತಿ ಓಮಿನಿ, ಹೊಳೆನರಸೀಪುರದಲ್ಲಿ 2 ಬೊಲೋರೊ ಪಿಕಪ್ ವಾಹನ, ಸುಬ್ರಹ್ಮಣ್ಯದಲ್ಲಿ 2 ಮಾರುತಿ ಓಮ್ನಿ, ಪುತ್ತೂರು ನಗರದಲ್ಲಿ 4 ವಾಹನಗಳನ್ನು ಪತ್ತೆ ಮಾಡಿರುವುದಾಗಿ ತಿಳಿದು ಬಂದಿದೆ. ಒಟ್ಟು 20 ವಾಹನಗಳನ್ನು ಪತ್ತೆಹಚ್ಚಲು ಪೊಲೀಸರು ಯಶಸ್ವಿಯಾಗಿದ್ದು, ಇವುಗಳ ಮೌಲ್ಯ ಸುಮಾರು 44 ಲಕ್ಷ ರೂಪಾಯಿಗಳು ಎನ್ನಲಾಗಿದೆ.

- Advertisement -

Related news

error: Content is protected !!