Saturday, April 20, 2024
spot_imgspot_img
spot_imgspot_img

ಕಾಫಿ ತೋಟದಲ್ಲಿ ಲಕ್ಷಾಂತರ ಮೌಲ್ಯದ ಪುರಾತನ ನಾಣ್ಯಗಳು ಪತ್ತೆ..!

- Advertisement -G L Acharya panikkar
- Advertisement -
vtv vitla
vtv vitla
vtv vitla
vtv vitla

ಸಕಲೇಶಪುರ: ಬ್ರಿಟೀಷರ ಕಾಲದ ಪುರಾತನ ಬೆಳ್ಳಿ ನಾಣ್ಯಗಳನ್ನು ಪತ್ತೆಯಾದ ಘಟನೆ ನಡೆದಿದೆ. ಹಾಲೇ ಬೇಲೂರು ಗ್ರಾಮದ ಶ್ಯಾಮ್ ಎಂಬುವರ ಕಾಫಿ ತೋಟದಲ್ಲಿ ವಾಟೆಗದ್ದೆ ಗ್ರಾಮದ ಹರೀಶ್ ಹಾಗೂ ಇತರರು ಕಳೆದ 15 ದಿನಗಳ ಹಿಂದೆ ಕೆಲಸ ಮಾಡುವಾಗ ಬ್ರಿಟೀಷರ ಕಾಲದ ಕೆಲ ನಾಣ್ಯಗಳು ದೊರಕಿದೆ. ಇದನ್ನು ಮಾಲಿಕರಿಗೆ ತಿಳಿಸದೆ ತೆಗೆದುಕೊಂಡು ಹೋಗಿದ್ದಾರೆ.

ರಾಣಿ ವಿಕ್ಟೋರಿಯಾ ಅವರ ಚಿತ್ರವಿರುವ 1860 ರಿಂದ 1904ರಲ್ಲಿ ಟಂಕಿಸಲಾಗಿರುವ 1 ರೂ. ಮುಖಬೆಲೆಯ 28 ನಾಣ್ಯಗಳು ಸಿಕ್ಕಿವೆ. ಇಂದಿನ ಮಾರುಕಟ್ಟೆಯಲ್ಲಿ ಇವುಗಳ ಬೆಲೆ ಲಕ್ಷಾಂತರ ರೂ. ಇದೆ ಎನ್ನಲಾಗಿದೆ.

vtv vitla

ಕೆಲಸಗಾರರಿಗೆ ನಿಧಿ ಸಿಕ್ಕಿದೆ ಎಂಬ ಸುದ್ದಿ ಗ್ರಾಮದಲ್ಲಿ ಹರಡಿದಾಗ ಈ ಕುರಿತು ತೋಟದ ಮಾಲಿಕರು ಹರೀಶ್ ಬಳಿ ಈ ಕುರಿತು ವಿಚಾರಿಸಿದಾಗ ಅವನು ನನಗೆ ಬೆಳ್ಳಿಯಂತಿರುವ ಕೇವಲ 9 ನಾಣ್ಯ ಸಿಕ್ಕಿದೆ ಎಂದು ಹೇಳಿ ಮಾಲಿಕರಿಗೆ 9 ನಾಣ್ಯ ಒಪ್ಪಿಸಿದ್ದಾನೆ. ಈ ವೇಳೆಗಾಗಲೇ ಮಾಹಿತಿ ಸಿಕ್ಕ ತೋಟದ ಮಾಲಿಕ ಶ್ಯಾಮ್ ಪೋಲಿಸರಿಗೆ ಈ ಕುರಿತು ದೂರು ನೀಡಿ 9 ನಾಣ್ಯಗಳನ್ನು ಪೋಲಿಸರಿಗೆ ಒಪ್ಪಿಸಿದ್ದಾರೆ. ಹರೀಶ್ ನನ್ನು ಪೊಲೀಸರು ಬಂಧಿಸಿದ್ದರು. ತನಿಖೆಯ ವೇಳೆ ಮತ್ತೆ 19 ನಾಣ್ಯಗಳನ್ನು ಕಾರ್ಮಿಕನಿಂದ ವಶಪಡಿಕೊಳ್ಳಲಾಗಿದೆ. ಕಾರ್ಮಿಕನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.

ಒಟ್ಟು 28 ಬೆಳ್ಳಿ ನಾಣ್ಯಗಳು ದೊರಕಿದ್ದು ಈ ನಾಣ್ಯಗಳಿಗೆ ಮಾರುಕಟ್ಟೆಯಲ್ಲಿ ಕೋಟ್ಯಾಂತರ ಮೌಲ್ಯದ ಬೆಲೆ ಇದ್ದು, ವಶಪಡಿಸಿಕೊಂಡ ನಾಣ್ಯಗಳನ್ನು ಪ್ರಾಚೀನ ಹಾಗೂ ಪುರಾತತ್ವ ಇಲಾಖೆಗೆ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.

suvarna gold
- Advertisement -

Related news

error: Content is protected !!