- Advertisement -
- Advertisement -





ಹಾಸನ: ಕಾಡಾನೆ ದಾಳಿ ಮಾಡಿ ಮಹಿಳೆಯೊಬ್ಬರು ಸಾವನ್ನಪಿರುವ ಘಟನೆ ಸಕಲೇಶಪುರ ತಾಲೂಕಿನ ಮೂಗಲಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಮೃತರನ್ನು ಶೋಭಾ(40) ಎಂದು ಗುರುತಿಸಲಾಗಿದೆ.
ಶೋಭಾ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ದಾಳಿ ಆನೆ ಅವರನ್ನು ತುಳಿದು ಕೊಂದಿದೆ. ಘಟನೆಯ ಮಾಹಿತಿ ಪಡೆದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ. ಈ ಘಟನೆಯಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.
- Advertisement -








