Thursday, April 25, 2024
spot_imgspot_img
spot_imgspot_img

“ಬೈಕ್ ಡೇಂಜರಸ್ ಆಗುತ್ತಿದೆ ಎಚ್ಚರಿಕೆ”

- Advertisement -G L Acharya panikkar
- Advertisement -

✍? – ಸಲೀಂ ಮಾಣಿ

ಮನೆಯಲ್ಲಿ ಒಂದು ಕಾರು ಅಥವಾ ರಿಕ್ಷಾ ಇದ್ದರೂ ಬೈಕ್ ಆಕ್ಟಿವಾ ಹೊಂದಲು ಜನ ಬಯಸುತ್ತಾರೆ ಕಾರಣ ಅರ್ಜೆಂಟ್ ಹೋಗಿ ಬರಲು ಸಣ್ಣ ಇಕ್ಕಟ್ಟಾದ ರಸ್ತೆಗಳಿಗೆ ದ್ವಿಚಕ್ರ ವಾಹನ ಇದ್ದರೆ ಬಹಳ ಉಪಕಾರವಾಗುತ್ತದೆ ಅಂತ. ಆದರೆ ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಸಾವು ಉಂಟಾಗುತ್ತಿದ್ದು ಅಪಘಾತಗಳಲ್ಲಿ ಅದರಲ್ಲೂ ದ್ವಿಚಕ್ರ ವಾಹನಗಳ ಅಪಘಾತ ಮತ್ತಷ್ಟು ಹೆಚ್ಚುತ್ತಿದ್ದು ಸವಾರರು ದಾರುಣವಾಗಿ ಸಾವನ್ನಪ್ಪುತ್ತಿರುವುದು ಬಹಳ ಒಂದು ಕಳವಳ ಮತ್ತು ಬೇಸರದ ಸಂಗತಿಯಾಗಿರುತ್ತದೆ.

ದ್ವಿಚಕ್ರ ವಾಹನಗಳು ಉಪಕಾರಕ್ಕಿಂತ ಹೆಚ್ಚು ಅಪಾಯವಾಗಿ ಮಾರ್ಪಡುತ್ತಿದೆ,ಸಾಮಾನ್ಯವಾಗಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸುವವರನ್ನು ಜನರೇ ಶಪಿಸುವುದುಂಟು ಅವನಿಗೆ ಹಾಗೆ ಹೋಗಬೇಕ ಅಹಂಕಾರ ಅಲ್ವಾ ಏನಾದರೂ ಹೆಚ್ಚುಕಮ್ಮಿ ಆದರೆ ಅಂತ ಏನೆಲ್ಲಾ ಆಗುವ ಅನಾಹುತದ ಬಗ್ಗೆ ಮಾತನಾಡಿಕೊಳ್ಳುವುದುಂಟು ಆದರೆ ಹೆಚ್ಚಿನ ಅಪಘಾತಗಳಲ್ಲಿ ಘನವಾಹನಗಳದ್ದೇ ತಪ್ಪು ಇರುತ್ತದೆ ದ್ವಿಚಕ್ರ ವಾಹನಗಳನ್ನು ಗಣನೆಗೆ ತೆಗೆದುಕೊಳ್ಳದೆ ಬೇಕಾಬಿಟ್ಟಿ ವಿರುದ್ಧ ದಿಕ್ಕಿನಲ್ಲೂ ಎಲ್ಲೆಂದರಲ್ಲಿ ಡ್ರೈವಿಂಗ್ ಮಾಡುತ್ತಾ ಹೋಗುವುದೂ ಕಾರಣಗಳಲ್ಲೊಂದು

ಇತ್ತೀಚಿನ ಘಟನೆಗಳನ್ನು ನೋಡುವಾಗ ಬೈಕ್‌ನಲ್ಲಿ ಎಲ್ಲಿಗಾದರೂ ಹೋದರೆ ತಿರುಗಿ ಬರುವುದು ಏನು ಗ್ಯಾರಂಟಿ ? ತಿರುಗಿ ಮನೆಗೆ ಬಂದು ಮುಟ್ಟಿದರೆ ಪುಣ್ಯ ಎಂಬಂತಾಗಿದೆ ಪರಿಸ್ಥಿತಿ! ಏನೇ ಆಗಲಿ ದ್ವಿಚಕ್ರ ವಾಹನ ಸವಾರರು ಸಾಕಷ್ಟು ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ಚಲಾಯಿಸುವುದು ಕಾಲದ ಅನಿವಾರ್ಯತೆಯಾಗಿದೆ.

- Advertisement -

Related news

error: Content is protected !!