Wednesday, June 23, 2021
spot_imgspot_img
spot_imgspot_img

ಅಕ್ರಮ ಮರಳುಗಾರಿಕೆಗೆ ದಾಳಿ: ಎರಡು ಡ್ರೆಜ್ಜಿಂಗ್ ಬೋಟ್, ಟಿಪ್ಪರ್, ಮರಳು ವಶಕ್ಕೆ

- Advertisement -
- Advertisement -

ಉಡುಪಿ: ಅಕ್ರಮ ಮರಳುಗಾರಿಕೆಗೆ ಅಧಿಕಾರಿಗಳ ತಂಡ ದಾಳಿ ನಡೆಸಿ, ಎರಡು ಡ್ರೆಜ್ಜಿಂಗ್ ಬೋಟ್‌ಗಳು, ಟಿಪ್ಪರ್, ಮರಳನ್ನು ವಶಪಡಿಸಿಕೊಂಡ ಘಟನೆ ಬ್ರಹ್ಮಾವರ ಮತ್ತು ಅಜೆಕಾರಿನಲ್ಲಿ ನಡೆದಿದೆ.

ಮಂಗಳವಾರ ಮಧ್ಯಾಹ್ನ ಅಕ್ರಮ ಮರಳುಗಾರಿಕೆ ಬಗ್ಗೆ ಬಂದ ಮಾಹಿತಿ ಯಂತೆ ಗಣಿ ಇಲಾಖೆ ಹಿರಿಯ ಭೂ ವಿಜ್ಞಾನಿ ಸಂದೀಪ್, ಬ್ರಹ್ಮಾವರ ತಾಲೂಕು ಭೂ ವಿಜ್ಞಾನಿ ಹಝೀರ ಹಾಗೂ ಬ್ರಹ್ಮಾವರ ಪೊಲೀಸರು ಚೇರ್ಕಾಡಿ ಗ್ರಾಮದ ಮಡಿಸಾಲು ಹೊಳೆ ಸಮೀಪ ದಾಳಿ ನಡೆಸಿದ್ದು, ಸ್ಥಳದಲ್ಲಿದ್ದ ಡ್ರೆಜ್ಜಿಂಗ್ ಬೋಟ್‌ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬುಧವಾರ ಬೆಳಗ್ಗೆ ಮರ್ಣೆ ಗ್ರಾಮ ಅಜೆಕಾರು ಸಮೀಪ ಬಸ್ತಿಮಠ ಎಂಬಲ್ಲಿ ರುವ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ದಾಳಿ ನಡೆಸಿದ ಕುಂದಾಪುರ ಎಸಿ ರಾಜು ನೇತೃತ್ವದ ಅಧಿಕಾರಿಗಳ ತಂಡ ದಾಳಿ, ಮರಳು ಗಾರಿಕೆ ನಡೆಸುತ್ತಿದ್ದ ಡ್ರೆಜ್ಜಿಂಗ್ ಬೋಟ್, ಒಂದು ಟಿಪ್ಪರ್, 10 ಟನ್ ಮರಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಗಣಿ ಇಲಾಖೆ ಭೂ ವಿಜ್ಞಾನಿ ಗೌತಮ್ ಶಾಸ್ತ್ರಿ, ಅಜೆಕಾರ್ ಎಸ್‌ಐ ಸುದರ್ಶನ್ ಪಾಲ್ಗೊಂಡಿದ್ದರು.

- Advertisement -
- Advertisement -

MOST POPULAR

HOT NEWS

Related news

error: Content is protected !!