Wednesday, July 29, 2026
spot_imgspot_img
spot_imgspot_img

ವಿಟ್ಲ: ಸತ್ಯಜ್ಯೋತಿ ಕ್ರಿಯೇಷನ್ಸ್ ಅರ್ಪಿಸುವ “ಗ್ರಾಮದ ಒಡೆಯ ಶ್ರೀ ಶಂಕರನಾರಾಯಣ” ಭಕ್ತಿಗೀತೆ ಬಿಡುಗಡೆ

- Advertisement -
- Advertisement -

ವಿಟ್ಲ: ಸಿಡಿ ಕ್ಯಾಸೆಟ್ ಗಳ ಕಾಲ ಹೋಗಿ, ಪ್ರಸ್ತುತ ಗೀತೆಗಳನ್ನು ಆನಲೈನ್ ಮಾಧ್ಯಮಗಳಲ್ಲಿ ಬಿಡುಗಡೆ ಮಾಡುವ ಕಾಲ ಬಂದಿದೆ. ಯೂಟ್ಯೂಬ್ ನಲ್ಲಿ ಹಾಡುಗಳು ಬಿಡುಗಡೆಗೊಂಡು ಜನರನ್ನು ಅತೀ ಸುಲಭ ಹಾಗೂ ಬೇಗವಾಗಿ ತಲುಪುತ್ತಿದೆ. ಸತ್ಯಜ್ಯೋತಿ ಕ್ರಿಯೇಷನ್ಸ್ ಅರ್ಪಿಸುವ “ಗ್ರಾಮದ ಒಡೆಯ ಶ್ರೀ ಶಂಕರನಾರಾಯಣ” ಬಿಡುಗಡೆಯಾಗಲಿದೆ.

ದಿನಾಂಕ 02-01-2022ನೇ ರವಿವಾರ ಮತ್ತು 03-01-2022ನೇ ಸೋಮವಾರ ಎರುಂಬು ಶ್ರೀ ಶಂಕರನಾರಾಯಣ ದೇವರ ಸನ್ನಿಧಿಯಲ್ಲಿ ಮಂಡಲ ಪೂಜಾ ಉತ್ಸವ ನಡೆಯಲಿದ್ದು, ಈ ಶುಭದಿನದಂದು ಎರುಂಬು ಶ್ರೀ ಶಂಕರನಾರಾಯಣ ಕ್ಷೇತ್ರದ ಕನ್ನಡ ಭಕ್ತಿಗೀತೆಯು ದಿನಾಂಕ-02-01-2022ನೇ ಅದಿತ್ಯವಾರ ಬಿಡುಗಡೆಯಾಗಲಿದೆ.

ಈ ಭಕ್ತಿಗೀತೆಗೆ ರಾಗ ಸಂಯೋಜನೆ ಶ್ರೀ ಕಾಳಿಗ ತನಯ ಉಮಾಮಹೇಶ್ವರ ಸ್ವಾಮೀಜಿ ಓಂಕಾರ ಆಶ್ರಮ ಬೆಂಗಳೂರು, ನಿರ್ಮಾಣ ಶಾಶ್ವತ್ ರೈ ಎರುಂಬು(ಅಬುಧಾಬಿ), ನಿರ್ದೇಶನವನ್ನ ಪ್ರವೀಣ್ ಜಯ ವಿಟ್ಲ ಮಾಡಿದ್ದು, ಸಾಹಿತ್ಯ & ಗಾಯನ ಶುಭಜಯಪ್ರಕಾಶ್ ರೈ ಕುದ್ರೆಪ್ಪಾಡಿ, ಸಹಗಾಯನ ವರ್ಷ ಹಾಗೂ ಮೌಲ್ಯ ರೈ, ತಬಲ ಸಚಿನ್ ಶೆಟ್ಟಿ ಕುದ್ರೆಪ್ಪಾಡಿ, ಕೊಳಲು ದಿವ್ಯ ಧನುಷ್ ರೈ ಹೀಗೆ ಹಲವು ಕಲಾವಿದರ ಕೂಡುವಿಕೆಯ ಈ ಭಕ್ತಿಗೀತೆ ದಿನಾಂಕ-02-01-2022ನೇ ಅದಿತ್ಯವಾರ ಎರುಂಬು ಶ್ರೀ ಶಂಕರನಾರಾಯಣ ದೇವರ ಸನ್ನಿಧಿಯಲ್ಲಿ ಬಿಡುಗಡೆಯಾಗಲಿದೆ.

suvarna gold

- Advertisement -

Related news

error: Content is protected !!