Tuesday, July 28, 2026
spot_imgspot_img
spot_imgspot_img

ಅಳಿಕೆ: ಬಂಟ್ಸ್ ಬಹರೈನ್ ವತಿಯಿಂದ ಮಾ. 19 ರಂದು ಶ್ರೀ ಲಕ್ಷ್ಮಿ ಸಹಿತ ಸತ್ಯನಾರಾಯಣ ಪೂಜಾ ಹಾಗೂ ಭಜನಾ ಕಾರ್ಯಕ್ರಮ

- Advertisement -
- Advertisement -

ಅಳಿಕೆ: ಬಂಟ್ಸ್ ಬಹರೈನ್ ವತಿಯಿಂದ ಇದೇ ಬರುವ ಮಾರ್ಚ್ 19 ರಂದು ಸಂಜೆ ಗಂಟೆ 5.30 ರಿಂದ ಶ್ರೀ ಎರುಂಬು ಬಾಲಕೃಷ್ಣ ಕಾರಂತರ ಪೌರೋಹಿತ್ಯದಲ್ಲಿ ಶ್ರೀ ಲಕ್ಷ್ಮಿ ಸಹಿತ ಸತ್ಯನಾರಾಯಣ ಪೂಜಾ ಹಾಗೂ ಭಜನಾ ಕಾರ್ಯಕ್ರಮವು ಎರುಂಬು ಶ್ರೀ ವಿಷ್ಣುಮಂಗಳ ದೇವಾಲಯದಲ್ಲಿ ನಡೆಯಲಿದೆ ಎಂದು ಬಂಟ್ಸ್ ಬಹರೈನ್ ಸಂಘದ ಅಧ್ಯಕ್ಷ ಮೋಹನ್ ದಾಸ್ ರೈ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಕಾರ್ಯಕ್ರಮಗಳ ಮೂಲಕ 2021ರ ಕಾರ್ಯಕ್ರಮಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಕೊರೋನ ಸಮಸ್ಯೆಯಿಂದ ಈ ಬಾರಿ ಪೂಜೆಯನ್ನು ಊರಿನಲ್ಲೇ ನಡೆಸಲು ತೀರ್ಮಾನಿಸಿದ್ದು ಬಂಟ ಬಾಂಧವರು ಹಾಗೂ ಎಲ್ಲಾ ಭಕ್ತಾಭಿಮಾನಿಗಳು ಪಾಲ್ಗೊಳ್ಳುವಂತೆ ತಿಳಿಸಿದ್ದಾರೆ.

- Advertisement -

Related news

error: Content is protected !!