Saturday, June 20, 2026
spot_imgspot_img
spot_imgspot_img

*ಹಿಟ್ ಆಂಡ್ ರನ್ -ವೃದ್ಧ ಸ್ಥಳದಲ್ಲೇ ಸಾವು..!*

- Advertisement -
- Advertisement -

ಮಂಗಳೂರು : ಕಿನ್ನಿಗೋಳಿಯ ಪೆಟ್ರೋಲ್ ಪಂಪ್ ಸಮೀಪ ವೇಗವಾಗಿ ಬಂದ ಸ್ಕೂಟರ್ ವಾಹನವೊಂದು ರಸ್ತೆ ಬದಿಯಲ್ಲಿ ರಾತ್ರಿ ವೇಳೆ ನಡೆದುಕೊಂಡು ಹೋಗುತ್ತಿದ್ದ ವೃದ್ದನಿಗೆ ಡಿಕ್ಕಿಯಾದ ಪರಿಣಾಮ, ವೃದ್ದ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿ ಕಟೀಲು ಸಮೀಪದ ಎಕ್ಕಾರು ಕೆಂಚಗುಡ್ಡೆ ನಿವಾಸಿ ರಾಮಚಂದ್ರ (65) ಎಂದು ಗುರುತಿಸಲಾಗಿದ್ದು, ನಿನ್ನೆ ರಾತ್ರಿ ವೇಳೆ ಕಿನ್ನಿಗೋಳಿಯ ಪೆಟ್ರೋಲ್ ಪಂಪ್ ಸಮೀಪ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂಧರ್ಭ, ವೇಗವಾಗಿ ಬಂದ ಅಪರಿಚಿತ ಸ್ಕೂಟರ್ ವಾಹನವೊಂದು ವೃದ್ಧನಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸ್ಕೂಟರ್ ಸವಾರ ಕೂಡಲೇ ಪರಾರಿಯಾಗಿದ್ದಾನೆ.

- Advertisement -

Related news

error: Content is protected !!