Sunday, June 7, 2026
spot_imgspot_img
spot_imgspot_img

ಬಿಜೆಪಿ ಹಿರಿಯ ನಾಯಕ ಎಲ್​ಕೆ ಅಡ್ವಾಣಿ ಮತ್ತೆ ಆಸ್ಪತ್ರೆಗೆ ದಾಖಲು

- Advertisement -
- Advertisement -

ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ ಅವರನ್ನು ಮಂಗಳವಾರ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಯ ಮೂಲಗಳ ಪ್ರಕಾರ 96 ವರ್ಷದ ಅಡ್ವಾಣಿ ಅವರ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಕೇವಲ ಒಂದು ತಿಂಗಳಾಗಿತ್ತಷ್ಟೇ ಅನಾರೋಗ್ಯದ ಕಾರಣ ಮತ್ತೆ ದೆಹಲಿಯ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಅವರನ್ನು ನರರೋಗ ತಜ್ಞ ಡಾ., ವಿನಿತ್ ಅವರು ನೋಡಿಕೊಳ್ಳುತ್ತಿದ್ದಾರೆ.

ಇದಕ್ಕೂ ಮುನ್ನ ಅಡ್ವಾಣಿ ಅವರನ್ನು ಜುಲೈ 3ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮರು ದಿನವೇ ಅವರನ್ನು ಬಿಡುಗಡೆಗೊಳಿಸಲಾಗಿತ್ತು. ಒಂದು ವಾರ ಮೊದಲು ಆರೋಗ್ಯ ಸಂಬಂಧಿತ ಸಮಸ್ಯೆಗಳಿಗಾಗಿ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು, ಮರುದಿನ ಬಿಡುಗಡೆಗೊಂಡಿದ್ದಾರೆ.

- Advertisement -

Related news

error: Content is protected !!