Thursday, June 18, 2026
spot_imgspot_img
spot_imgspot_img

ಸ್ಯಾಕ್ಸೋಪೋನ್ ಕಲಾನಿಧಿ ಪ್ರಶಸ್ತಿ, ಚಿನ್ನದ ಪದಕ” ಮುಡಿಗೇರಿಸಿಕೊಂಡ ಪುತ್ತೂರಿನ ಹೆಸರಾಂತ ಕಲಾವಿದ ಡಾಕ್ಟರ್ ಪಿಕೆ ಗಣೇಶ್

- Advertisement -
- Advertisement -

ಪುತ್ತೂರು : ತಮಿಳುನಾಡಿನ ಮೈಲಾಡುತುರೈಯಲ್ಲಿರುವ ಧರ್ಮಪುರಂ ಅಧೀನಂ 27ನೇ ಗುರು ಮಹಾಸನ್ನಿಧಾನಂ ತಿರುಪ್ಪಾನಂದಲ್ ಕುಂಬಾಭಿಷೇಕದಲ್ಲಿ ನಡೆದ ಸಂಗೀತ ಕಚೇರಿಯಲ್ಲಿ ಪುತ್ತೂರಿನ ಸ್ಯಾಕ್ರೋಪೋನ್ ವಾದಕ, ಲಯನ್ಸ್‌ ಕ್ಲಬ್‌ ವಿಟ್ಲ ಸಿಟಿಯ ಕಾರ್ಯದರ್ಶಿ ಶ್ವೇತಾ ರವಿಕುಮಾರ್‌ರವರ ತಂದೆ ಡಾ.ಪಿ.ಕೆ ಗಣೇಶ್ ರವರು ಕಲಾನಿಧಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಜು.07 ರಂದು ನಡೆದ ಸಂಗೀತ ಕಚೇರಿಯಲ್ಲಿ ಪುತ್ತೂರಿನ ಇತಿಹಾಸ ಪ್ರಸಿದ್ದ ಶ್ರೀಮಹಾಲಿಂಗೇಶ್ವರ ದೇವಳದ ಪ್ರಧಾನ ಸ್ಯಾಕ್ರೋಪೋನ್ ವಾದಕ ಡಾ.ಪಿ.ಕೆ ಗಣೇಶ್ ಅವರಿಗೆ ಚಿನ್ನದ ಪದಕ ಮತ್ತು ಸ್ಯಾಕ್ರೋಪೋನ್ ಕಲಾನಿಧಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಇನ್ನೂ ಡಾ. ಪಿ.ಕೆ ಗಣೇಶ್ ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ತಮಿಳುನಾಡಿನ ಧರ್ಮಪುರಂ ಅಧೀನಂ (ಮಠ) ಸ್ಯಾಕ್ಟೋಪೋನ್ ಕ್ಷೇತ್ರಕ್ಕೆ ನೀಡಿದ ಪ್ರಶಸ್ತಿ ಹಾಗೂ ಚಿನ್ನದ ಪದಕ ಇದಾಗಿದೆ.

- Advertisement -

Related news

error: Content is protected !!