Thursday, April 25, 2024
spot_imgspot_img
spot_imgspot_img

ಜೈಲುವಾಸ ಮುಗಿಸಿ ಶಶಿಕಲಾ ಮರಳಿ ತವರಿಗೆ

- Advertisement -G L Acharya panikkar
- Advertisement -

ಬೆಂಗಳೂರು: ಜೈಲುವಾಸ ಅಂತ್ಯ ಬಳಿಕ ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಮರಳಿ ತಮಿಳುನಾಡಿಗೆ ತೆರಳಲಿದ್ದಾರೆ.

ಇವರು ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣ ಬೆಳೆಸಲಿದ್ದು, ತಮಿಳುನಾಡಿನಲ್ಲಿ ಶಶಿಕಲಾ ಸ್ವಾಗತಕ್ಕೆ ಬೆಂಬಲಿಗರು ಸಿದ್ಧತೆ ನಡೆಸಿದ್ದಾರೆ. ಕೊರೊನಾ ಹಿನ್ನೆಲೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಶಶಿಕಲಾ ಜೈಲು ಶಿಕ್ಷೆ ಪೂರ್ಣವಾದ ಬಳಿಕ ಜನವರಿ 27ರಂದು ಬಿಡುಗಡೆಯಾಗಿದ್ದರು. ನಂತರದಲ್ಲಿ ಜ್ಯೋತಿಷಿಗಳ ಸಲಹೆ ಮೇರೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕವೂ ಬೆಂಗಳೂರಿನಲ್ಲಿಯೇ ಇದ್ದರು.

ಇಂದು ಮರಳಿ ತಮಿಳುನಾಡಿಗೆ ತೆರಳಲಿದ್ದು, ರಾಜಕೀಯ ಗರಿಗೆದರಿದೆ. ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿರುವ ತಮಿಳುನಾಡಿನಲ್ಲಿ ಶಶಿಕಲಾ ಮುಂದೇನು ಮಾಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ.

ಜನವರಿ 31ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಶಶಿಕಲಾ ಬೆಂಗಳೂರಿನ ಹೊರವಲಯದಲ್ಲಿರುವ ದೇವನಹಳ್ಳಿ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದರು.

- Advertisement -

Related news

error: Content is protected !!