Thursday, April 25, 2024
spot_imgspot_img
spot_imgspot_img

ಬೌರಿಂಗ್​​ನಿಂದ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಆದ ಶಶಿಕಲಾ!

- Advertisement -G L Acharya panikkar
- Advertisement -

ಬೆಂಗಳೂರು; ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತ ಸ್ನೇಹಿತೆ ಶಶಿಕಲಾ ಆರೋಗ್ಯ ಮತ್ತಷ್ಟು ಬಿಗಡಾಯಿಸಿದ ಹಿನ್ನೆಲೆಯಲ್ಲಿ ಅವರನ್ನು ಬೌರಿಂಗ್​​ನಿಂದ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

63 ವರ್ಷದ ಶಶಿಕಲಾ ಟೈಪ್​​-2 ಡಯಾಬಿಟಿಸ್​ನಿಂದ ಕೂಡ ಬಳಲುತ್ತಿದ್ದಾರೆ. ಅಲ್ಲದೇ ಅವರಿಗೆ ಉಸಿರಾಟ ಸಂಬಂಧಿ (SARI) ಆರೋಗ್ಯ ಸಮಸ್ಯೆ ಕೂಡ ಉಲ್ಬಣಿಸಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಆ್ಯಂಟಿ ಬಯೋಟಿಕ್ಸ್​​, ಆ್ಯಂಟಿ ವೈರಸಲ್ ಮೆಡಿಸಿನ್, ಇನ್ಸುಲಿನ್ ಮುಂತಾದ ಅವಶ್ಯಕ ಔಷಧಿಗಳನ್ನು ನೀಡಲಾಗಿದೆ ಎಂದು ಆಸ್ಪತ್ರೆ ಪ್ರಕಟನೆ ತಿಳಿಸಿದೆ.

ಪರೀಕ್ಷೆ ವೇಳೆ ಅವರ ಪಲ್ಸ್​ ರೇಟ್ 89 ಬೀಟ್ ಪರ್ ಮಿನ್ಯೂಟ್, ಹೈ ಬ್ಲಡ್​​ಪ್ರೆಷರ್ ಇರೋದು ತಿಳಿದು ಬಂದಿದೆ. ಅಲ್ಲದೇ, ಸಿಟಿ ಸ್ಕ್ಯಾನ್​ ಮಾಡಿದ ಬಳಿಕ ಅವರ ಶ್ವಾಸಕೋಶದಲ್ಲಿ ಸೋಂಕು ತಗುಲಿರೋ ಲಕ್ಷಣಗಳು ಕಂಡು ಬಂದಿದ್ದು, ಕೊರೊನಾ ಸೋಂಕು ತಗುಲಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

- Advertisement -

Related news

error: Content is protected !!