Thursday, July 30, 2026
spot_imgspot_img
spot_imgspot_img

ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನ ಬಂಧನ!

- Advertisement -
- Advertisement -

ಶಿರ್ವ: ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನೊಬ್ಬನನ್ನು ಬಂಧಿಸಿರುವ ಘಟನೆ ಶಿರ್ವದ ಸೈಂಟ್ ಮೇರಿಸ್ ವೃತ್ತದ ಬಳಿ ನಡೆದಿದೆ. ಒರಿಸ್ಸಾ ಮೂಲದ ಬಡಾನಿಡಿಯೂರಿನ ಸಾಗರ್(22) ಬಂಧಿತ ಆರೋಪಿ.

ಈತನನ್ನು ವಶಕ್ಕೆ ಪಡೆದ ಪೊಲೀಸರು ಈತನಿಂದ 32,000 ರೂಪಾಯಿ ಮೌಲ್ಯದ 1 ಕೆ.ಜಿ, 100 ಗ್ರಾಂ ಗಾಂಜಾ (ತಲಾ 50 ಗ್ರಾಂ ನಂತೆ 22 ಪ್ಲಾಸ್ಟಿಕ್ ತೊಟ್ಟೆಗಳು), 7 ಖಾಲಿ ಪ್ಲಾಸ್ಟಿಕ್‌ ತೊಟ್ಟೆಗಳು, 1,200 ರೂಪಾಯಿ ನಗದು, ಗಾಂಜಾ ತುಂಬಿಸಿದ ಬ್ಯಾಗ್‌, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ, ಮೊಬೈಲ್ ಫೋನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!