Sunday, June 21, 2026
spot_imgspot_img
spot_imgspot_img

ಯುವಕರ ಮೇಲೆ ಚಾಕು ಇರಿತ – ಓರ್ವ ಸಾವು, ಮತ್ತೋರ್ವ ಗಂಭೀರ!

- Advertisement -
- Advertisement -

ಶಿವಮೊಗ್ಗ: ಇಬ್ಬರು ಯುವಕರ ಮೇಲೆ ಅಪರಿಚಿತರು ಚಾಕುವಿನಿಂದ ಇರಿದ ಘಟನೆ ಶಿವಮೊಗ್ಗದ ಸುಂದರ ಆಶ್ರಯದ ಬಳಿ ನಡೆದಿದೆ. ರಾತ್ರಿ ಬಾರ್ ಮುಂದೆ ನಿಂತಿದ್ದ ಇಬ್ಬರು ಯುವಕರ ಮೇಲೆ ನಾಲ್ವರು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ಸಾವು, ಮತ್ತೋರ್ವನಿಗೆ ಗಂಭೀರ ಗಾಯಗಳಾಗಿವೆ.

ಜೀವನ್ (28) ಎಂಬಾತ ಮೃತವಾಗಿದ್ದು, ಕೇಶವ (28) ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದೆ. ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!