Monday, July 27, 2026
spot_imgspot_img
spot_imgspot_img

ಶಿವಮೊಗ್ಗ: ನಾಡಬಾಂಬ್‌ ಸ್ಫೋಟ; ವೃದ್ಧೆಗೆ ಗಂಭೀರ ಗಾಯ

- Advertisement -
- Advertisement -

ಶಿವಮೊಗ್ಗ: ನಾಡಬಾಂಬ್ ಸಿಡಿದು ವೃದ್ಧೆ ಗಂಭೀರವಾಗಿ ಗಾಯಗೊಂಡ ಘಟನೆ ತೀರ್ಥಹಳ್ಳಿ ತಾಲೂಕಿನ ನಂಟೂರು ಗ್ರಾಮದಲ್ಲಿ ನಡೆದಿದೆ.

ಗಾಯಗೊಂಡ ವೃದ್ಧೆಯನ್ನು ಕಮಲಮ್ಮ(72) ಎಂದು ಗುರುತಿಸಲಾಗಿದೆ. ಹಂದಿ ಶಿಕಾರಿಗೆ ತೋಟದಲ್ಲಿ ಅಡಿಕೆಯೊಳಗೆ ನಾಡಾಬಾಂಬ್ ಇರಿಸಿರುವ ಸಾಧ್ಯತೆ ಇದ್ದು, ಅದನ್ನು ನಾಯಿ ಕಚ್ಚಿಕೊಂಡು ಮನೆ ಅಂಗಳಕ್ಕೆ ತಂದಿಟ್ಟಿತ್ತು ಎನ್ನಲಾಗಿದೆ. ಅಂಗಳದಲ್ಲಿ ಬಿದ್ದಿದ್ದ ನಾಡಬಾಂಬ್‌ನ್ನು ಮುಟ್ಟಿದಾಗ ಸ್ಫೋಟಗೊಂಡಿದೆ.

ಸ್ಫೋಟದಿಂದ ಮಹಿಳೆಯ ಕೈ ಹಾಗೂ ಬೆರಳುಗಳಿಗೆ ಗಾಯವಾಗಿದೆ. ಗಾಯಾಳುವಿಗೆ ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!