Saturday, April 27, 2024
spot_imgspot_img
spot_imgspot_img

ಕಡಬದ ಯುವಕನಿಂದ ವನ್ಯಜೀವಿ (ಡಾಕ್ಯುಮೆಂಟರಿ) ಕಿರು ಚಿತ್ರ

- Advertisement -G L Acharya panikkar
- Advertisement -

ಪುತ್ತೂರು(ಅ.30): ದಕ್ಷಿಣ ಕನ್ನಡ ಜಿಲ್ಲೆಯ ಮೊಟ್ಟಮೊದಲ ವನ್ಯಜೀವಿ ಕಿರು ಚಿತ್ರ ಎಂಬ ಹೆಗ್ಗಳಿಕೆಗೆ ಸಾತ್ವಿಕ್ ಪಿ.ಯಸ್ ಹಾಗೂ ಧ್ಯಾನ್ ಸಿ.ಕೆ. ಅವರ “ಅರ್ಬನ್ ಲಂಗೂರ್” ಪಾತ್ರವಾಗಿದೆ. ಇದರ ಟ್ರೈಲರ್ ಬಿಡುಗಡೆಯಾಗಿದೆ.


ಸಾತ್ವಿಕ್ ಪಿ.ಯಸ್ ಅವರು ಕಡಬ ಪನೆಮಜಲು ಸುರೇಶ್ ಕುಮಾರ್ ಅವರ ಪುತ್ರರಾಗಿದ್ದು, ಪ್ರಸ್ತುತ ನಿಟ್ಟೆ ಕಾಲೇಜ್ ಆಫ್ ಆರ್ಕಿಟೆಕ್ಟ್ ನಲ್ಲಿ ತೃಿತೀಯ ವರ್ಷದ ವಿದ್ಯಾರ್ಥಿ ಹಾಗೂ ಧ್ಯಾನ್ ಸಿ.ಕೆ. ಪ್ರಸ್ತುತ ಮಣಿಪಾಲದಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳು.


ಇವರಿಬ್ಬರೂ ಹವ್ಯಾಸಿ ಫೋಟೋಗ್ರಾಫರ್ ಗಳಾಗಿದ್ದು, ಅತೀ ಹೆಚ್ಚಾಗಿ ದಟ್ಟ ಅರಣ್ಯದಲ್ಲಿ ಕಾಣಸಿಗುವ ಲಂಗೂರ್ (Langur) ಸದ್ಯ ನಮ್ಮ ಮಂಗಳೂರಿನ ಕೆಂಜಾರು ಪ್ರದೇಶದಲ್ಲಿ ಕೆಲವು ಕಡೆ ಕಾಣಸಿಗುವುದು ವಿಶೇಷ. ಇದನ್ನು ಅರಿತ ಈ ಹವ್ಯಾಸಿ ಯುವಕರಾದ ಸಾತ್ವಿಕ್ ಹಾಗು ಧ್ಯಾನ್, ಕೆಂಜಾರು ಪ್ರದೇಶಗಳಿಗೆ ತೆರಳಿ ಲಂಗೂರ್ ಬಗ್ಗೆ ಅಧ್ಯಯನ ನಡೆಸಿ ಅವುಗಳ ಜೀವನ ಕ್ರಮ, ಸಂತಾನಭಿವೃಧ್ಧಿ, ಇವುಗಳ ಬಗ್ಗೆ ಅರಿತು “ವೈಲ್ಡ್ ಲೈಫ್ ಡಿಕೆ” ( wildlife_dk) ಎನ್ನುವ ಹೆಸರಿನ ತಂಡವನ್ನು ರಚಿಸಿ, “ಅರ್ಬನ್ ಲಂಗೂರ್ (URBAN LANGUR) ಎಂಬ ಕಿರು ಡಾಕ್ಯುಮೆಂಟರಿ ಚಿತ್ರ ರಚನೆ ಮಾಡಿದ್ದಾರೆ. ಇದರ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೇ ರಾಷ್ಟೀಯ ಪತ್ರಿಕೆಯಲ್ಲಿಯೂ ಕಿರು ಚಿತ್ರದ ಕುರಿತು ಲೇಖನ ಹೊರಬಂದಿದೆ.

ಕಿರುಚಿತ್ರ ದ ಟ್ರೈಲರ್ ಈ ಲಿಂಕ್ ಮೂಲಕ ನೋಡಬಹುದು.

- Advertisement -

Related news

error: Content is protected !!