Friday, April 19, 2024
spot_imgspot_img
spot_imgspot_img

ವಿಟ್ಲ: ಜನರ ಜೀವದ ಜೊತೆ ಚೆಲ್ಲಾಟ ನಡೆಸುತ್ತಿರುವ ಶ್ರೀ ದೇವಿ ಬಸ್ ಮಾಲಕ; ಶೀಘ್ರವೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸಾರ್ವಜನಿಕ ಆಕ್ರೋಶ

- Advertisement -G L Acharya panikkar
- Advertisement -

ವಿಟ್ಲ: ಜನರ ಜೀವದ ಜೊತೆ ಚೆಲ್ಲಾಟ ನಡೆಸುತ್ತಿರುವ ಶ್ರೀ ದೇವಿ ಬಸ್ ಮಾಲೀಕನ ವಿರುದ್ಧ ಸಾರ್ವಜನಿಕ ವಲಯದಿಂದ ಆಕ್ರೋಶ ಕೇಳಿಬಂದಿದೆ. ಬಸ್ಸಿಗೆ ಸಂಬಂಧಿಸಿದ ಇನ್ಸೂರೆನ್ಸ್ ಹಾಗೂ ಎಫ್ ಸಿ (Fitness certificate) ಸರಿಯಾಗಿ ನಿರ್ವಹಿಸದೇ ಜನರ ಜೀವನ ಜೊತೆ ಚೆಲ್ಲಾಟ ನಡೆಸುತ್ತಿದ್ದಾರೆ.

ಬಸ್ಸು ಆರ್‌.ಟಿ.ಓ ಅಧಿಕಾರಿಗಳ ವಶ
ದಕ್ಷ ಅಧಿಕಾರಿ ಚರಣ್ ಇವರ ನೇತೃತ್ವದ ತಂಡ ಮೊನ್ನೆ ತಪಾಸಣೆ ನಡೆಸುತ್ತಿದ್ದ ವೇಳೆ ದೇವಿ ಬಸ್ಸನ್ನು ನಿಲ್ಲಿಸಲು ಹೇಳಿದ್ದಾರೆ. ಈ ವೇಳೆ ಅಧಿಕಾರ ಸೂಚನೆ ಪಾಲಿಸದೆ ಬಸ್ಸನ್ನು ನಿಲ್ಲಿಸದೆ ಬಸ್ಸಿನ ಚಾಲಕ ಮುಂದೆ ಹೋಗಿದ್ದಾನೆ. ನಂತರ ಅಧಿಕಾರಿಗಳು ಹಿಂಬಾಲಿಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಇನ್ಸೂರೆನ್ಸ್ ಕಟ್ಟದೇ ಇರುವುದು ಬೆಳಕಿಗೆ ಬಂದಿದೆ. ನವೆಂಬರ್‍ 10, 2021 ಕ್ಕೆ ಇನ್ಸೂರೆನ್ಸ್ ವಾಯಿದೆ ಮುಗಿದು ಹೋಗಿರುವುದು ಬಹಿರಂಗವಾಗಿದೆ. ಆ ಬಳಿಕ ಇನ್ಸೂರೆನ್ಸ್ ನವೀಕರಣಗೊಳಿಸದೇ ಬಸ್ಸು ಓಡಿಸಿದ್ದು ಕಾನೂನು ಪ್ರಕಾರ ಅಪರಾಧವಾಗಿದೆ.

ನೂರಾರು ಮಂದಿಯ ಬಾಳಿನಲ್ಲಿ ಚೆಲ್ಲಾಟವಾಡಿದ ಮಾಲಕನ ಮೇಲೆ ಸಾರ್ವಜನಿಕರು ಛೀಮಾರಿ ಹಾಕಿದ್ದಾರೆ. ಇನ್ನು ಫಿಸಿಕಲ್ ಸರ್ಟಿಫಿಕೇಟ್ ಅವಧಿ ಕೂಡ ಮಾರ್ಚ್‌ 21, 2021ಕ್ಕೆ ಮುಕ್ತಾಯಗೊಂಡಿದೆ. ಜನರ ಜೀವನದ ಜೊತೆ ಚೆಲ್ಲಾಟ ನಡೆಸಿದ ಶ್ರೀದೇವಿ ಬಸ್ಸಿನ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಜನರ ಪ್ರಾಣಕ್ಕೆ ಕಿಂಚಿತ್ತೂ ಬೆಲೆಕೊಡದ ಬಸ್ಸಿನ ಮಾಲೀಕನನ್ನು ಕಂಬಿ ಎಣಿಸುವಂತೆ ಮಾಡಬೇಕೆಂದು ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಷ್ಟೆಲ್ಲಾ ತಪ್ಪು ಮಾಡಿದ ಬಸ್ಸಿನ ಮಾಲಕರು ಸುದ್ದಿ ಪ್ರಕಟಿಸಿದ ಮಾಧ್ಯಮಕ್ಕೆ ತಾನೇನು ತಪ್ಪು ಮಾಡಿಲ್ಲ ಎಂದು ಧಮ್ಕಿ ಹಾಕಿದ್ದಾನೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಇನ್ನು ತಪ್ಪಿನ ಅರಿವಾಗುತ್ತಿದ್ದಂತೆ ಬಾಲ ಮುದುಡಿಸಿ ನಂತರ ಕ್ಷಮೆಯಾಚನೆ ಮಾಡಿದ ಘಟನೆ ಕೂಡ ನಡೆದಿದೆ.

- Advertisement -

Related news

error: Content is protected !!