Sunday, July 26, 2026
spot_imgspot_img
spot_imgspot_img

ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮರ್ ಹೂಂ ಉಮರುಲ್ ಫಾರೂಕ್ ಎಂಕೆ ಮತ್ತು ಮಹಮ್ಮದ್ ಮೋನು ಬಿಕ್ನಾಜೆ ಅವರ ಸ್ಮರಣಾರ್ಥ ಸಾರ್ವಜನಿಕ ರಕ್ತದಾನ ಶಿಬಿರ

- Advertisement -
- Advertisement -

ವಿಟ್ಲ: ಎಸ್ ಕೆ ಎಸ್ ಎಸ್ ಎಫ್ ಕೊಡಂಗಾಯಿ ಶಾಖೆ, ದ.ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘ ಮತ್ತು ವಿಖಾಯ ರಕ್ತದಾನಿ ಬಳಗ ದ.ಕ ಜಿಲ್ಲೆ ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದ.ಕ ಸಹಬಾಗಿತ್ವದಲ್ಲಿ ಮರ್ ಹೂಂ ಉಮರುಲ್ ಫಾರೂಕ್ ಎಂಕೆ ಮತ್ತು ಮಹಮ್ಮದ್ ಮೋನು ಬಿಕ್ನಾಜೆ ಅವರ ಸ್ಮರಣಾರ್ಥ ಸಾರ್ವಜನಿಕ ರಕ್ತದಾನ ಶಿಬಿರ ಮತ್ತು ಸನ್ಮಾನ ಕಾರ್ಯಕ್ರಮ ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಪುಷ್ಪಕ್ ಕ್ಲಿನಿಕ್ ನ ವೈದ್ಯಾಧಿಕಾರಿ ಡಾ. ವಿ.ಕೆ.ಹೆಗ್ಡೆ, ವಿಟ್ಲ ಎಸೈ ವಿನೋದ್ ರೆಡ್ಡಿ, ಸಿಇಟಿ ರ್ಯಾಂಕ್ ವಿಜೇತ ಸಮರ್ಥ್ ಕುಮಾರ್ ಶೆಟ್ಟಿ ಬಿಕ್ನಾಜೆ, ಹಾಫಿಝ್ ಮಹಮ್ಮದ್ ಅಶ್ಫಾನ್ ರಾಧುಕಟ್ಟೆ ಅವರನ್ನು ಸನ್ಮಾನಿಸಲಾಯಿತು.

ಸಯ್ಯಿದ್ ಅಬ್ದುಲ್ ಬಾತಿಷ್ ತಂಙಳ್ ಕುಕ್ಕಾಜೆ ದುವಾಃ ಆಶೀರ್ವಚನ ನೀಡಿದರು. ರಫೀಕ್ ಮುಸ್ಲಿಯಾರ್ ಕಡಂಬು ಉದ್ಘಾಟಿಸಿದರು.

ದ.ಕ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಬಾಬು ಕೆ. ವಿಟ್ಲ, ದ.ಕ ಶಾಮಿಯಾನ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಶಿವ ಪ್ರಸಾದ್ ಹೆಗ್ಡೆ ಮಿಜಾರು,ಕಾರ್ಯದರ್ಶಿ ಮೆಕ್ಸಿಮ್ ಸಿಕ್ವೇರ, ಅಬ್ದುಲ್ ಹಕೀಂ ಪರ್ತಿಪ್ಪಾಡಿ, ಅಝರುದ್ದೀನ್ ಕೊಡಂಗಾಯಿ, ರಶೀದ್ ಡಿ.ಎಂ, ಸಿ.ಎಚ್.ಇಬ್ರಾಹಿಂ ಮುಸ್ಲಿಯಾರ್ ಪರ್ತಿಪ್ಪಾಡಿ, ಇಬ್ರಾಹಿಂ ಝೈನಿ ಕೊಡಂಗಾಯಿ, ಅಬ್ದುಸಮದ್ ಸಾಲೆತ್ತೂರು, ಅಶ್ರಫ್ ಮಣಿಮಜಲು, ಹಂಝ ಕುರಿಯಪ್ಪಾಡಿ, ಉಮರ್ ಮುಸ್ಲಿಯಾರ್ ರಾಧುಕಟ್ಟೆ, ಇರ್ಶಾದ್ ಇಂಜಿನಿಯರ್, ರಫೀಕ್ ಕೊಡಂಗಾಯಿ, ಅಬ್ದುಲ್ ಮಜೀದ್ ಟಿ.ಎಂ., ಅನೀಸ್ ಎಂ.ಎಚ್, ಎ.ಎಂ‌.ಮುಹಮ್ಮದ್ ಕುಂಞ ಕೊಡಂಗಾಯಿ, ಲಕ್ಷ್ಮೀಶ್ ರೈ ಕೊಡಂಗಾಯಿ, ಬದ್ರುದ್ದೀನ್ ಮರಕ್ಕಿಣಿ, ವೆಂಕಟೇಶ್ ರೆಡ್ ಕ್ರಾಸ್ ಉಪಸ್ಥಿತರಿದ್ದರು. ಕೆಎಂಎ ಕೊಡಂಗಾಯಿ ಸ್ವಾಗತಿಸಿ, ನಿರೂಪಿಸಿದರು.

- Advertisement -

Related news

error: Content is protected !!